ಚಾರ್ಮಾಡಿ: ಸರ್ವೆ ನಂಬರ್ 177/2, 179/1ಎ1ಪಿ3, 178/ ವಿಸ್ತೀರ್ಣದಲ್ಲಿ ಒಟ್ಟು 3.92 ಜಾಗವಿದ್ದು, ಆ ಜಾಗದಲ್ಲಿ ಮೌಲಾನಾ ಆಜಾದ್ ಶಾಲೆ ಕಕ್ಕಿಂಜೆಗೆ ಜಮೀನನ್ನು ಮಂಜೂರುಗೊಳಿಸುವ ಬಗ್ಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಿರುತ್ತಾರೆ. ನಮ್ಮ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗವನ್ನು ಯಾವುದೇ ಸಂಸ್ಥೆಗಳಿಗೆ ಮಂಜೂರು ಮಾಡದೆ ದೇವಸ್ಥಾನದ ಜಾಗವನ್ನು ಯಥಾಸ್ಥಿತಿಯಲ್ಲಿ ಇಡಬೇಕಾಗಿ ಹಾಗೂ ದೇವಸ್ಥಾನಕ್ಕೆ ಸಂಬಂಧಪಟ್ಟ, ದೇವಸ್ಥಾನದ ಸ್ವಾಧೀನದಲ್ಲಿರುವ ಜಾಗದ ಸುತ್ತು ಗಡಿಗುರುತು ಮಾಡಿ ಆ ಜಾಗವನ್ನು ಭದ್ರತೆಗೊಳಿಸುವಂತೆ ಮನವಿಯಲ್ಲಿ ತಿಳಿಸಿದರು. ಹಾಗೂ ಈ ಬಗ್ಗೆ ಯಾವುದೇ ಸಮಸ್ಯೆಯಾದರೆ ಇದರ ಬಗ್ಗೆ ಸೂಕ್ತ ಹೋರಾಟವನ್ನು ಕೈಗೊಳ್ಳುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ವತಿಯಿಂದ ಪಂಚಾಯತ್ ಅಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು. ವಿ.ಹಿಂ. ಪರಿಷತ್ ಅಧ್ಯಕ್ಷ, ಸಂಯೋಜಕರು, ಕಾರ್ಯದರ್ಶಿ, ಸದಸ್ಯರು ಉಪಸ್ಥಿತರಿದ್ದರು.
Home ಇತ್ತೀಚಿನ ಸುದ್ದಿಗಳು ಚಾರ್ಮಾಡಿ: ದೇವಸ್ಥಾನದ ಜಾಗವನ್ನು ಯಥಾ ಸ್ಥಿತಿಗೆ ಇಡುವಂತೆ ವಿ.ಹಿಂ.ಪ ಭಜರಂಗದಳದಿಂದ ಪಂಚಾಯತ್ ಅಧ್ಯಕ್ಷರಿಗೆ ಮನವಿ