ಬೆಳ್ತಂಗಡಿ: ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ‘ಸೌಖ್ಯವನ’ ದಲ್ಲಿ ವಿಧುಷಿ ದೀಕ್ಷಾ ವಿ. ಅವರಿಗೆ ಅಭಿನಂದನಾ ಸಮಾರಂಭ ಜರಗಿತು.
ಸಾಯಂ ಘಂಟೆ 4:30ಕ್ಕೆ ಸರಿಯಾಗಿ ಧರ್ಮಸ್ಥಳ ಸಂಸ್ಥೆಯ ಕ್ಷೇಮಹಾಲ್ ನಲ್ಲಿ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾ ಅವರು ಅಧ್ಯಕ್ಷತೆಯನ್ನು ವಹಿಸಿ, ದೀಕ್ಷಾ ವಿ. ಅವರ ಸಾಧನೆಯನ್ನು ಕೊಂಡಾಡಿದರು. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ದೊಡ್ಡ ಸಾಧನೆ ಮಾಡಿದ ಶ್ರಮದ ಹಿಂದೆ ಅವರ ಪತಿಯಾದ ರಾಹುಲ್ ಅವರ ಬೆಂಬಲ ಮತ್ತು ಪ್ರೋತ್ಸಾ ಹ ಪ್ರಾಮುಖ್ಯವಾದುದು ಎಂದರು. ನಂತರ ಅವರನ್ನು ಶಾಲು ಹೊದಿಸಿ ಸ್ಮರಣಿಕೆ , ಉಡುಗೊರೆ ನೀಡಿ ಗೌರವಿಸಲಾಯಿತು.
ಹೆಬ್ರಿಯ ಖ್ಯಾತ ವಿಧುಷಿ ಮಮತ ಮಯೂರಿಯವರು ಅಭಿನಂದನಾ ನುಡಿಗಳನ್ನು ಆಡಿದರು. ಮಾಜಿ ನಗರ ಸಭಾ ಸದಸ್ಯ ಮಹೇಶ್ ಠಾಕೂರ್ ಅವರು ದೀಕ್ಷಾಳ ಸಾಧನೆಯ ಹಿಂದೆ ಇದ್ದ ಛಲ ಮತ್ತು ಇಚ್ಚಾಶಕ್ತಿಯ ಬಗ್ಗೆ ವರ್ಣಿಸಿದರು. ಇದೊಂದು ಅಪೂರ್ವ ಸಾಧನೆ ಎಂದು ಬಣ್ಣಿಸಿದರು. ಸನ್ಮಾನಕ್ಕೆ ದೀಕ್ಷಾ ವಿ. ಕೃತಜ್ಞತೆಯನ್ನು ಸಲ್ಲಿಸಿ ದೈವ ದೇವರ ಮತ್ತು ನಿಮ್ಮೆಲ್ಲರ ಆಶೀರ್ವಾದದಿಂದ ಈ ಸಾಧನೆ ಮಾಡಲು ಸಾದ್ಯವಾಯಿತೆಂದರು.
ಮುಖ್ಯ ವೈದ್ಯಾಧಿಕಾರಿಯಾದ ಡಾ .ಗೋಪಾಲ್ ಪೂಜಾರಿಯವರು ಶುಭಾಸಂಶನೆಗೈದರು. ಆಸ್ಪತ್ರೆ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಪ್ರಸ್ತಾವಣೆ ಗೈದು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸ್ವಾತಿ ಅವರು ವಂದಿಸಿದರು.