ಉಜಿರೆ: ಸಂತ ಆಂತೊನಿ ಚರ್ಚ್, ಮಂಗಳೂರು ಕ್ಯಾಥೋಲಿಕ್ ಸಭಾ ಪ್ರದೇಶ ಘಟಕ ವತಿಯಿಂದ ಅಪಘಾತ ವಿಮೆ ಮತ್ತು ವೈದ್ಯಕೀಯ ವಿಮೆ ಮಾಹಿತಿ ಕಾರ್ಯಾಗಾರ ಸೆ. 7ರಂದು ಕ್ಯಾಥೋಲಿಕ್ ಉಜಿರೆ ಸಂತ ಅಂತೋನಿ ಚರ್ಚ್ ಹಾಲ್ ನಲ್ಲಿ ಜರಗಿತು.
ಭಾರತೀಯ ಅಂಚೆ ಇಲಾಖೆಯಿಂದ ಸಂಪನ್ಮೂಲ ವ್ಯಕ್ತಿ
ಗುರುಪ್ರಸಾದ್ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಪುತ್ತೂರು ಡಿವಿಷನ್ ಭಾಗವಹಿಸಿ ಮಾಹಿತಿ ನೀಡಿದರು.
ಆಧ್ಯಾತ್ಮಿಕ ನಿರ್ದೇಶಕ ಫಾ.ಅಬೆಲ್ ಲೋಬೊ, ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ. ವಿಜಯ್ ಲೋಬೊ, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಅಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಕಥೋಲಿಕ ಸಭಾ ಘಟಕ ಅಧ್ಯಕ್ಷ
ಪ್ರವೀಣ್ ಪಿಂಟೋ, ಕಾರ್ಯದರ್ಶಿ ಲಿಡಿಯಾ ರೊಡ್ರಿಗಸ್,
ಉಜಿರೆ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.