ಬೆಳ್ತಂಗಡಿ: ಮಂಜುಶ್ರೀ ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಬೆಳ್ತಂಗಡಿ ಘಟಕ, ರೋಟರಿ ಸೇವಾ ಟ್ರಸ್ಟ್, ಬೆಳ್ತಂಗಡಿ ರೋಟರಿ ಕ್ಲಬ್, ಬೆಳ್ತಂಗಡಿ ತಾಲೂಕು ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕರ ಸೇವಾ ಸಮಿತಿ, ಬೆಳ್ತಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ಡಾ। ಅಶ್ವಿನ್ ಐ ಕೇರ್ ಸೆಂಟರ್ ಪುತ್ತೂರು ಇದರ ಸಹಯೋಗದೊಂದಿಗೆ ಸೆ.7ರಂದು ಉಚಿತ ನೇತ್ರ ಪರೀಕ್ಷೆ ಮತ್ತು ಚಿಕಿತ್ಸಾ ಶಿಬಿರ ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಜರುಗಿತು.
ಕಾರ್ಯಕ್ರಮವನ್ನು ಬೆಳ್ತಂಗಡಿ ತಾಲೂಕು ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕರ ಸೇವಾ ಸಮಿತಿಯ ವಿಠ್ಠಲ್ ಶೆಟ್ಟಿ
ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಐ ಕೇರ್ ಸೆಂಟರ್ ಪುತ್ತೂರಿನ ಡಾ. ಅಶ್ವಿನ್ ಮತ್ತು ಡಾ. ಶಾಂತರಾಮ್ ಮಾಹಿತಿ ನೀಡಿದರು. ರೋಟರಿ ಕ್ಲಬ್ ನ ಮಾಜಿ ಅಧ್ಯಕ್ಷ ಶ್ರೀಕಾಂತ್ ಉಪಸ್ಥಿತರಿದ್ದರು.
ಮಂಜುಶ್ರೀ ಸೀನಿಯರ್ ಚೇಂಬರ್ ಅಧ್ಯಕ್ಷ ಮಂಜುನಾಥ್ ರೈ ಸ್ವಾಗತಿಸಿದರು. ಸೀನಿಯರ್ ಅರ್ವಿನ್ ಡಿ. ಸೋಜಾ ಕಾರ್ಯಕ್ರಮ ನಿರೂಪಿಸಿದರು. ಪದ್ಮ ಕುಮಾರ್ ಧನ್ಯವಾದವಿತ್ತರು.