




ಬೆಳ್ತಂಗಡಿ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆ.7ರಂದು ಮತ್ತೆ ಗಿರೀಶ್ ಮಟ್ಟಣ್ಣನವರ್ ವಿಚಾರಣೆಗೆ ಹಾಜರಾಗಿದ್ದಾರೆ. ಬುರುಡೆ ಪ್ರಕರಣ ಸಂಬಂಧ ವಿಚಾರಣೆ ಮುಂದುವರಿಸಲಿರುವ ಎಸ್ಐಟಿ ಹಲವಾರು ಮಾಹಿತಿಗಳನ್ನ ಪಡೆದುಕೊಳ್ಳುವ ಸಾಧ್ಯತೆ ಇದೆ. ಮತ್ತೊಂದೆಡೆ ಸೌಜನ್ಯ ಮಾವ ವಿಠಲ ಗೌಡ ಸೆ. 6ರಂದು ವಿಚಾರಣೆಗೆ ಆಗಮಿಸಿ ತೆರಳಿದ್ದು ಇಂದು ಮತ್ತೆ ವಿಚಾರಣೆಗೆ ಬರುವ ಸಾಧ್ಯತೆ ಇದೆ.









