ಬೆಳಾಲು: ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಅನಂತ ಚತುರ್ಥಿ ಪೂಜೆ

0

ಬೆಳಾಲು: ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಶ್ರೀ ಆನುವಂಶಿಕ ಮೊತ್ತೇಸರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ದೇವಸ್ಥಾನದ ಗೌರವ ಮಾರ್ಗದರ್ಶಕ ಯು. ಶರತ್‌ ಕೃಷ್ಣ ಪಡ್ವೇಟ್ನಾಯರ ಮಾರ್ಗದರ್ಶನದಲ್ಲಿ ಸೆ. 6 ರಂದು ಅನಂತ ಚತುರ್ದಶಿ (ನೋಂಪು) ಪೂಜೆ ವೈದಿಕ ವಿಧಿ ವಿಧಾನ ಗಳೊಂದಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಆರಿಕೋಡಿ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ, ಕೊಲ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮೋಕ್ತೆಸರ ರಾಜಾರಾಮ ಶರ್ಮ ಎನ್ನಿತರ ಗಣ್ಯರು, ಭಕ್ತರು ಭಾಗವಹಿಸಿದ್ದರು.

ದೇವಸ್ಥಾನದ ಮೋಕ್ತೆಸರ ಜೀವಂದರ ಕುಮಾರ್ ಜೈನ್, ಆಸ್ರನ್ನ ಗಿರೀಶ್ ಬಾರಿತ್ತಾಯ, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀನಿವಾಸ ಗೌಡ,, ಪ್ರಧಾನ ಕಾರ್ಯದರ್ಶಿ ದುರ್ಗಾ ಪ್ರಸಾದ್ ಕೆರ್ಮುಣ್ಣಾಯ, ಉಪಾಧ್ಯಕ್ಷೆ ಮಮತಾ ದಿನೇಶ್ ಪೂಜಾರಿ, ಕಾರ್ಯದರ್ಶಿ ಸತೀಶ್ ಎಳ್ಳುಗದ್ದೆ, ಮತ್ತು ಸಮಿತಿಯ ಸದಸ್ಯರು, ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ, ಶ್ರೀ ಅನಂತೇಶ್ವರ ಭಜನಾ ಮಂಡಳಿಯ ಅಧ್ಯಕ್ಷರು, ಸದಸ್ಯರು, ಶ್ರೀ ಅನಂತ ಪದ್ಮನಾಭಾ ಮಹಿಳಾ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಹದಿನಾಲ್ಕು ಬೈಲುವಾರು ಸಮಿತಿಯ ಪ್ರದಾನ ಸಂಚಾಲಕರು ಹಾಗೂ ಸಂಚಾಲಕರು,
ಅರ್ಚಕ ವೃಂದ, ಸಿಬ್ಬಂದಿ ವರ್ಗ, ವಿಲಯದವರು, ಊರವರು ಹಾಜರಿದ್ದು ಸಹಕರಿಸಿದರು. ಬೆಳಿಗ್ಗೆ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕ ಕಲ್ಲೋಕ್ತ ಪೂಜೆ,ತೆನೆ ತಂದು ಪೂಜೆ, ಬಲಿವಾಡು ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.

LEAVE A REPLY

Please enter your comment!
Please enter your name here