ಉಜಿರೆ: ಎಸ್.ಡಿ.ಎಂ ಕಾಲೇಜಿನಲ್ಲಿ ಪೋಷನ್ ಜಾಗೃತಿ ಕಾರ್ಯಕ್ರಮ

0

ಉಜಿರೆ: ಪೋಷಣಾ ಮಾಸಾಚರಣೆಯ ಅಂಗವಾಗಿ ಉಜಿರೆ ಎಸ್‌.ಡಿ.ಎಂ ಕಾಲೇಜಿನ ಡಯಟ್ ಮತ್ತು ನ್ಯೂಟ್ರಿಷನ್ ವಿಭಾಗವು ಉಜಿರೆಯ ಎಸ್‌.ಡಿ.ಎಂ. ಡಿ-ಅಡಿಕ್ಷನ್ ಸೆಂಟರ್‌ನ ಪ್ರತಿನಿಧಿಗಳಿಗಾಗಿ ಪೋಷಣಾ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿತು.

ಈ ಕಾರ್ಯಕ್ರಮವನ್ನು ಎಸ್‌.ಡಿ.ಎಂ ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನಗಳ ಕಾಲೇಜಿನ ಮೂಲ ವೈದ್ಯಕೀಯ ವಿಜ್ಞಾನ ವಿಭಾಗದ ಡೀನ್ ಡಾ. ಬಾಲಕೃಷ್ಣ ಶೆಟ್ಟಿ, ಯೋಜನಾಧಿಕಾರಿ ಮಾಧವ ಗೌಡ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಡಾ. ಅಭಯ್ ಸಾಯಿ, ಪಿ.ಜಿ. ವಿದ್ಯಾರ್ಥಿ, ವ್ಯಸನಮುಕ್ತ ಜೀವನದಲ್ಲಿ ಸಮತೋಲಿತ ಆಹಾರದ ಮಹತ್ವ, ಪೌಷ್ಠಿಕಾಂಶಗಳ ಅಗತ್ಯತೆ ಹಾಗೂ ಆರೋಗ್ಯಕರ ಜೀವನಶೈಲಿಯ ಕುರಿತು ಉಪನ್ಯಾಸ ನೀಡಿದರು. ಡಿ-ಅಡಿಕ್ಷನ್ ಕೇಂದ್ರದ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಆರೋಗ್ಯಕರ ಆಹಾರ ಪದ್ಧತಿಗಳ ಕುರಿತು ಜ್ಞಾನವನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here