ಕಾಶಿಪಟ್ಣ: ಸ.ಹಿ.ಪ್ರಾ. ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ವಿದ್ಯಾರ್ಥಿನಿಯರು ಪ್ರಥಮ ಸ್ಥಾನಗಳಿಸಿ ಶಾಲೆಗೆ ಚಾಂಪಿಯನ್ಶಿಪ್ ತಂದು ಕೊಟ್ಟಿದ್ದಾರೆ.
ತಾಲೂಕಿನ ವಿವಿಧ ಶಾಲೆಗಳಿಗೆ ಸೇರಿದ ತಂಡಗಳ ನಡುವೆ ನಡೆದ ತ್ರೋಬಾಲ್ ಸ್ಪರ್ಧೆಯಲ್ಲಿ, ಕಾಶಿಪಟ್ಟಣ ಶಾಲೆಯ ಬಾಲಕರ ತಂಡವು ಕೂಡ ದ್ವಿತೀಯ ಸ್ಥಾನ (ರನ್ನರ್-ಅಪ್) ಗಳಿಸಿ ಶಾಲೆಗೆ ಎರಡನೆಯ ಚಾಂಪಿಯನ್ಶಿಪ್ ಟ್ರೋಫಿ ತಂದುಕೊಟ್ಟಿದೆ.
ಈ ಗೆಲುವಿನ ಕುರಿತಾಗಿ ಶಾಲಾ ಮುಖ್ಯೋಪಾಧ್ಯಾಯರು ಮಾತನಾಡಿ, ನಮ್ಮ ವಿದ್ಯಾರ್ಥಿಗಳ ಸಾಧನೆ ನಮಗೆಲ್ಲರಿಗೆ ಹೆಮ್ಮೆ ತಂದಿದೆ. ಇದು ಕೇವಲ ಒಂದು ಟ್ರೋಫಿ ಅಲ್ಲ, ಸಾಮೂಹಿಕ ಪ್ರಯತ್ನ ಮತ್ತು ಕಷ್ಟಪಟ್ಟು ದುಡಿಯುವುದರ ಸಂಕೇತ, ಎಸ್.ಡಿ.ಎಂಸಿ ಮತ್ತು ಊರಿನ ಹಿರಿಯರ ಬೆಂಬಲ ಇಲ್ಲದೆ ಇದು ಸಾಧ್ಯವಾಗುತ್ತಿರಲಿಲ್ಲ. ನಾವು ರಾಜ್ಯ ಮಟ್ಟದ ಪಂದ್ಯಗಳಿಗೆ ಸಿದ್ಧತೆ ಮಾಡುತ್ತೇವೆ ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಕಾಶಿಪಟ್ಟಣ ಗ್ರಾ.ಪಂ ಅಧ್ಯಕ್ಷರಾದ ಸತೀಶ್ ಕೆ., “ನಮ್ಮ ಗ್ರಾಮದ ಮಕ್ಕಳು ಕ್ರೀಡೆ ಮತ್ತು ವಿದ್ಯೆ ಎರಡರಲ್ಲೂ ಮೇಲ್ಮಟ್ಟದ ಸಾಧನೆ ಮಾಡುತ್ತಿದ್ದಾರೆ. ಇದು ನಮ್ಮೆಲ್ಲರಿಗೆ ಹೆಮ್ಮೆಯ ವಿಷಯ. ಭವಿಷ್ಯದಲ್ಲೂ ಇಂತಹ ಕಾರ್ಯಕ್ರಮಗಳಿಗೆ ಪೂರ್ಣ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ” ಎಂದರು.
ಕ್ರೀಡಾ ಶಿಕ್ಷಕರು ಮತ್ತು SDMC ಅಧ್ಯಕ್ಷರು ವಿದ್ಯಾರ್ಥಿಗಳನ್ನು ಅಭಿನಂದಿಸಿ, ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಸಾಧನೆಗಳನ್ನು ಮಾಡಲು ಪ್ರೋತ್ಸಾಹಿಸಿದರು. ಗ್ರಾಮಸ್ಥರು ಶಾಲೆಯ ಈ ಯಶಸ್ಸನ್ನು ಸ್ವಾಗತಿಸಿ, ಭವಿಷ್ಯದಲ್ಲಿ ಶಿಕ್ಷಣ ಮತ್ತು ಕ್ರೀಡೆಗಳಿಗೆ ತಮ್ಮ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ.