ಬೆಳ್ತಂಗಡಿ: ಮಿತ್ತಬಾಗಿಲು -ಮಲವಂತಿಗೆ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಯುವವಾಹಿನಿ ಸಂಚಲನಾ ಸಮಿತಿ, ಮಹಿಳಾ ಬಿಲ್ಲವ ವೇದಿಕೆಯಿಂದ ಸುಧೀರ್ಘ 37ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತರಾದ ಸುವರ್ಣ ವಿ. ವರಕಾಬೆ ಅವರಿಗೆ ಸೇವಾ ಸಿಂಧೂರ ಗೌರವ ನೀಡಿ ಅಭಿನಂದಿಸಲಾಯಿತು.
ಮಿತ್ತಬಾಗಿಲು ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸುರೇಂದ್ರ ಬನದಬಾಗಿಲು, ಕಾರ್ಯದರ್ಶಿ ಲೋಕೇಶ್ ಪೂಜಾರಿ ಕುಕ್ಕಾವು, ಯುವವಾಹಿನಿ ಸಂಚಲನಾ ಸಮಿತಿ ಅಧ್ಯಕ್ಷ ನಿತೇಶ್ ಅಡ್ಕದಕರೆ, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಗುರುರಾಜ್ ಕಿಲ್ಲೂರು, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷೆ ಜಯಶ್ರೀ ಜಾರಿಗೆ, ಹಿರಿಯ ಮಾರ್ಗದರ್ಶಕರಾದ ವಿಠಲ ಪೂಜಾರಿ ಹೊಸಮನೆ, ವೆಂಕಪ್ಪ ಪೂಜಾರಿ ಮಾಲೂರು, ಕೃಷ್ಣಪ್ಪ ಪೂಜಾರಿ ಕಿಲ್ಲೂರು ಸಮಿತಿಯ ಎಲ್ಲಾ ಪದಾಧಿಕಾರಿಗಳು ಮತ್ತು ಬೈಲುವಾರು ಸಮಿತಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.