ಬೆಳ್ತಂಗಡಿ: ಚಾರ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಠದ ಮಜಲು, ಕೆರೆಕೋಡಿ ಮೊದಲಾದ ಸ್ಥಳಗಳಲ್ಲಿ ಕಾಡಾನೆ ಹಿಂಡು ಸೆ.3ರಂದು ರಾತ್ರಿ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಉಂಟು ಮಾಡಿದೆ.
ಹಿಂಡಿನಲ್ಲಿ ಒಂದು ಮರಿಯಾನೆ ಸಹಿತ ಐದು ಆನೆಗಳಿರುವ ಶಂಕೆ ವ್ಯಕ್ತವಾಗಿದೆ. ಕಳೆದ ಕೆಲವು ದಿನಗಳಿಂದ ಚಾರ್ಮಾಡಿ ಪರಿಸರದಲ್ಲಿ ಕಾಡಾನೆ ಹಾವಳಿ ಕಂಡು ಬಂದಿರಲಿಲ್ಲ.
ಇದೀಗ ಕಾಡಾನೆಗಳ ಹಿಂಡು ಈ ಪರಿಸರದಲ್ಲಿ ಲಗ್ಗೆ ಇಟ್ಟಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಒಂದು ವಾರದ ಹಿಂದೆ ಬೆಳಗಿನ ಜಾವ ಒಂಟಿ ಸಲಗ ಇಲ್ಲಿನ ಮೃತ್ಯುಂಜಯ ನದಿಯ ಪರಿಸರದಲ್ಲಿ ಕಂಡುಬಂದಿತ್ತು.