ಉಜಿರೆ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024- 25ನೇ ಸಾಲಿನ ವಾರ್ಷಿಕ ಮಹಾಸಭೆ ಸೆ. 4ರಂದು ಸಂಘದ ವಠಾರದಲ್ಲಿ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಆರ್ಥಿಕ ವರ್ಷದಲ್ಲಿ ನಿವ್ವಳ ರೂ.92.52.494/ ಲಾಭ ಗಳಿಸಿ ಸದಸ್ಯರಿಗೆ ಶೇ. 12 ಡಿವಿಡೆಂಟ್ ಘೋಷಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಉಜಿರೆ ಜನಾರ್ದನ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೆಸರ ಶರತ್ ಕೃಷ್ಣ ಪಡುವೆಟ್ನಾಯ, ಸಂಘದ ಉಪಾಧ್ಯಕ್ಷ ಸದಾಶಿವ ಯಾನೆ ಶ್ರೀಧರ ಪೂಜಾರಿ, ನಿರ್ದೇಶಕರುಗಳಾದ ಅರುಣ್ ಕುಮಾರ್, ಗುರುರಾಜ ಗೌಡ ಅಂತರ, ರಜತ ಗೌಡ, ಅರವಿಂದ ಕಾರಂತ್, ಅನಿಲ್ ಪ್ರಕಾಶ್ ಡಿಸೋಜ, ಬಾಲಕೃಷ್ಣ ಗೌಡ, ಪುಷ್ಪಾವತಿ ಆರ್. ಶೆಟ್ಟಿ, ವಾರಿಜ ಎಸ್. ಗೌಡ, ಅಣ್ಣು ನಾಯ್ಕ, ಸಾಧು ಎಂ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಸುದರ್ಶನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸರಸ್ವತಿ ಸಿ. ರೈ, ಉಪಸ್ಥಿತರಿದ್ದರು.
ಸಿಬ್ಬಂದಿ ಮೋಹನ ಗೌಡ ಮಹಾಸಭೆಯ ಕಾರ್ಯಕಲಾಪ ನಡೆಸಿದರು. ಹಿರಿಯ ಸದಸ್ಯ ನಿವೃತ್ತ ಸರಕಾರಿ ನೌಕರ ರೇಷ್ಮೆ ಇಲಾಖೆಯ ಎಸ್. ಜಿ. ಭಟ್, ಉದ್ಯಮಿ ಅಬ್ದುಲ್ ರಹಿಮಾನ್, ಯೋಜನೆಯ ನಿವೃತ್ತ ನಿರ್ದೇಶಕ ಸೀತಾರಾಮ ಶೆಟ್ಟಿ ಕೆಂಬರ್ಜೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಂಘದಲ್ಲಿ 42 ವರ್ಷ ಕರ್ತವ್ಯ ನಿರ್ವಸಿ ನಿವೃತ್ತಿ ಹೊಂದಿದ ರಾಮಣ್ಣ ನಾಯ್ಕ ಇವರನ್ನು ಸನ್ಮಾನಿಸಲಾಯಿತು.