ಕಲ್ಮಂಜ: ನವೋದಯ ವಿದ್ಯಾಲಯ ಸಮಿತಿ ನವದೆಹಲಿಯವರು ಆ.20ರಿಂದ 30ರವರೆಗೆ ಹಿಮಾಚಲ ಪ್ರದೇಶದ ಕಾಂಗ್ರದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಆಕಾಂಕ್ಷ್ ಯು.ಡಿ. 17ರ ವಯೋಮಾನದ ಬಾಲಕರ ವಿಭಾಗದಲ್ಲಿ, ಆರಾಧ್ಯ ಯು.ಡಿ. 14ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಚಿನ್ನದ ಪದಕ ಪಡೆದು ಎಸ್.ಜಿ.ಎಫ್.ಐ ಗೆ ಆಯ್ಕೆಯಾಗಿದ್ದಾರೆ.
ಜವಾಹರ್ ನವೋದಯ ವಿದ್ಯಾಲಯ ಮುಡಿಪುವಿನಲ್ಲಿ 9ನೇ ತರಗತಿ ಮತ್ತು 7ನೇ ತರಗತಿಯಲ್ಲಿ ಓದುತ್ತಿರುವ ಇವರು ಪುತ್ತೂರು ಜೀನಿಯಸ್ ಚೆಸ್ ಸ್ಕೂಲ್ ನ ಗುರು ಸತ್ಯಪ್ರಸಾದ್ ಕೋಟೆಯವರ ಶಿಷ್ಯರಾಗಿರುತ್ತಾರೆ. ಇದೇ ಚೆಸ್ ಸ್ಕೂಲ್ ನ ವಿದ್ಯಾರ್ಥಿಗಳಾದ ಮಂಗಳೂರಿನ ಪ್ರಶಾಂತ್ ಜೆ. ನಾಯಕ್ ಇವರಲ್ಲಿಯೂ ತರಬೇತಿ ಪಡೆದಿರುತ್ತಾರೆ. ಇವರಿಬ್ಬರೂ ಕೊಯ್ಯೂರು ಗ್ರಾಮದ ನಿವಾಸಿ, ಭಾರತೀಯ ಅಂಚೆ ಇಲಾಖೆ ಧರ್ಮಸ್ಥಳದಲ್ಲಿ ಉದ್ಯೋಗಿಯಾಗಿರುವ ಧನಂಜಯ ಯು. ಮತ್ತು ಸರಕಾರಿ ಪ್ರೌಢಶಾಲೆ ಕಲ್ಮಂಜದಲ್ಲಿ ಸಹ ಶಿಕ್ಷಕಿ ಪ್ರೇಮಲತಾ ಪಿ. ಅವರ ಮಕ್ಕಳಾಗಿದ್ದಾರೆ.