ಮಚ್ಚಿನ: ಗ್ರಾ.ಪಂ. ನ ಹಿಂದೂ ರುದ್ರಭೂಮಿಯಲ್ಲಿ ಮೃತದೇಹ ದಫನ ಮಾಡಲು ರಾತ್ರಿ ಸಮಯದಲ್ಲಿ ವಿದ್ಯುತ್ ವ್ಯವಸ್ಥೆ ಇಲ್ಲದೆ ಇರುವುದರಿಂದ ಗ್ರಾಮಸ್ಥರು ತೊಂದರೆ ಅನುಭವಿಸಿದ್ದು, ಈ ಕುರಿತಾಗಿ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಚಂದ್ರಕಾಂತ ನಿದ್ದಾಜೆ ರುದ್ರಭೂಮಿ ಸಮಿತಿಯ ಸದಸ್ಯರೊಂದಿಗೆ ಮಡಂತ್ಯಾರು ಸುವರ್ಣ ಎಲೆಕ್ಟ್ರಿಕಲ್ ಮಾಲಕ ಉಮೇಶ್ ಸುವರ್ಣ ಬೆರ್ಬಲಾಜೆ ಅವರ ಬಳಿ ವಿವರಿಸಿದ್ದರು. ಇದಕ್ಕೆ ತಕ್ಷಣ ಸ್ಪಂದಿಸಿ ಸುಮಾರು 25000/= ವೆಚ್ಚದ ವಿದ್ಯುತ್ ಸಂಪರ್ಕ ಕಲ್ಪಿಸಿಕೊಟ್ಟು ಉದಾರತೆ ಮೆರೆದ ಉಮೇಶ್ ಸುವರ್ಣ ಬೆರ್ಬಲಾಜೆಯವರಿಗೆ ಸಮಿತಿ ಹಾಗೂ ಊರವರು ಅಭಿನಂದನೆ ಸಲ್ಲಿಸಿದ್ದಾರೆ.
✍️ಹರ್ಷ ಬಳ್ಳಮಂಜ