ವಲಯ ಮಟ್ಟದ ತ್ರೋಬಾಲ್:ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿಯರು ತಾಲೂಕು ಮಟ್ಟಕ್ಕೆ ಆಯ್ಕೆ

0

ಕುವೆಟ್ಟು: ಮಚ್ಚಿನ ಸ.ಉ.ಹಿ.ಪ್ರಾ.ಶಾಲೆಯಲ್ಲಿ ನಡೆದ ಗುರುವಾಯನಕೆರೆ, ಪುಂಜಾಲಕಟ್ಟೆ ವಲಯ ಮಟ್ಟದ ತ್ರೋಬಾಲ್ ಪಂದ್ಯಾಟದಲ್ಲಿ ಕುವೆಟ್ಟು ಸ.ಉ.ಹಿ.ಪ್ರಾ.ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಉತ್ತಮ ಹಿಡಿತಗಾರ್ತಿಯಾಗಿ ಸಿಂಚನ, ಆಲ್-ರೌಂಡರ್ ನಿಹಾನ ಆಯ್ಕೆಯಾಗಿರುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕಿ ಪೂರ್ಣಿಮಾ ಬಿ. ತರಬೇತಿ ನೀಡಿದ್ದಾರೆ. ಶಾಲಾ ಎಸ್‌.ಡಿ.ಎಂ.ಸಿ ಅಧ್ಯಕ್ಷ ಸಿರಾಜ್ ಎಂ. ಚಿಲಿಂಬಿ, ಶಾಲಾ ಮುಖ್ಯ ಶಿಕ್ಷಕ ಭಾಸ್ಕರ್ ಹಾಗೂ ಅಧ್ಯಾಪಕ ವೃಂದದವರು ಸಹಕಾರ ನೀಡಿದರು.

LEAVE A REPLY

Please enter your comment!
Please enter your name here