ಮಡಂತ್ಯಾರು: ಯೇಸುವಿನ ಪವಿತ್ರ ಹೃದಯ ಚರ್ಚ್‌ನಲ್ಲಿ ಕೊಂಕಣಿ ಮಾನ್ಯತಾ ದಿನ ಆಚರಣೆ

0

ಮಡಂತ್ಯಾರು: ಆ.31ರಂದು ಕೊಂಕಣಿ ಮಾನ್ಯತಾ ದಿನವನ್ನು ಪ್ಯಾರಿಷ್ ಸಭಾಂಗಣದಲ್ಲಿ ಆಚರಿಸಲಾಯಿತು. ಸಾಮಾಜಿಕ ಸಂಬಂಧಗಳ ಆಯೋಗ, ಕ್ಯಾಥೋಲಿಕ್ ಚರ್ಚ್, ICYM. YCS ಮತ್ತು ರಂಗ್ ತರಂಗ್ ಸಂಘಟನೆಯಿಂದ ಆಚರಿಸಿದರು.

ಪ್ರಾರಂಭದಲ್ಲಿ ಕೊಂಕನಿ ಬ್ಯಾಂಡ್ ಸಂಗೀತಾ ನಾದದೊಂದಿಗೆ ಸಭಾoಗಣಕ್ಕೆ ಮೆರವಣಿಗೆ ಮುಖಾಂತರ ಆಗಮಿಸಿ ಕೊಂಕಣಿ ಧ್ವಜವನ್ನು ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಕಾರ್ಮೆಲಿತ್ ಫಾ. ಜೆರಾಲ್ಡ್ ಡಿಸೋಜಾ ವಹಿಸಿದ್ದರು. ನಾವು ಕೊಂಕಣಿ ಭಾಷೆ ಮನೆಗಳಲ್ಲಿ ಮಾತನಾಡಿ ಕೊಂಕಣಿ ಭಾಷೆ ಉಳಿಸುವ ಜವಾಬ್ದಾರಿ ನಮ್ಮದು. ಜೊತೆಗೆ ಕೊಂಕಣಿ ಸಂಸ್ಕೃತಿ ಉಳಿಸುವ ಜವಾಬ್ದಾರಿಯು ನಮ್ಮದು ಎಂದರು.

ಸಂಪನ್ಮೂಲ ವ್ಯಕ್ತಿಯಾಗಿ ನೆಲ್ಸನ್ ಮೋನಿಸ್ ಉಜಿರೆ ಅವರು ಮಾತನಾಡಿ ಕೊಂಕಣಿ ಭಾಷೆ ಮಾಹಿತಿ ನೀಡಿದರು. ಕೊಂಕಣಿ ಭಾಷೆ ಸಂವಿಧಾನಾದ 8ನೇ ಪರಿಚ್ಚೇಧಾನಕ್ಕೆ ಸೇರಿಸುವ ಬಗ್ಗೆ ಹೇಳಿದರು.
ಸೇಕ್ರೆಡ್ ಹಾರ್ಟ್ ಚರ್ಚ್ ಕಾರ್ಯದರ್ಶಿ ಹಾಗೂ ಸಾಮಾಜಿಕ ಸಂಬಂಧ ಆಯೋಗದ ಕಾರ್ಯದರ್ಶಿ ನೆಲ್ಸನ್ ಲಸ್ರಾದೊ ಎಲ್ಲರನ್ನೂ ಎಲೆ ಅಡಿಕೆ ನೀಡಿನೊಂದಿಗೆ ಸ್ವಾಗತಿಸಿದರು. ಎಲ್ಲಾ ಆಯೋಗಗಳ ಸಂಯೋಜಕರು ರಿಚರ್ಡ್ ಮೊರಾಸನ್. ನಾವು ಎರಿಕ್ ಓಜಾರಿಯಾ ಅವರಿಗೆ ಗೌರವ ಸಲ್ಲಿಸುತ್ತೇವೆ ಮತ್ತು ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ. ಅತಿಥಿಗಳು ಭಾವ ಚಿತ್ರಕ್ಕೆ ಹೂವುಗಳನ್ನು ಅರ್ಪಿಸಿದರು.

ವೇದಿಕೆಯಲ್ಲಿ ಜೆರಾಲ್ಡ್ ಡಿಸೋಜ, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷ ಜೆರಾಲ್ಡ್ ಮೊರಾಸ್, ಕಾರ್ಯದರ್ಶಿ ನೆಲ್ಸನ್ ಲಸ್ರಾದೊ, ಎಲ್ಲಾ ಆಯೋಗಗಳ ಸಂಯೋಜಕರಾದ ರಿಚರ್ಡ್ ಮೊರಾಸ್, ಕ್ಯಾಥೋಲಿಕ್ ಸಭಾ ಮಡಂತ್ಯಾರು ಘಟಕ ಅಧ್ಯಕ್ಷ ವಿನ್ಸೆಂಟ್ ಡಿಸೋಜ, ಸಂಪನ್ಮೂಲ ವ್ಯಕ್ತಿ ನೆಲ್ಸನ್ ಮೋನಿಸ್ ಉಜಿರೆ, ಕ್ಯಾಥೋಲಿಕ್ ಸಭಾ ಮಂಗಳೂರು ಪ್ರದೇಶ ಕೇಂದ್ರ ಸಮಿತಿ ಉಪಾಧ್ಯಕ್ಷ ಲಿಯೋ ರೊಡ್ರಿಗಸ್, ಐ.ಸಿ.ವೈ.ಎಂ. ಮಡಂತ್ಯಾರು ಘಟಕದ ಅಧ್ಯಕ್ಷೆ ಎಲ್ವಿಟಾ ಡಿ’ಸೋಜಾ ಉಪಸ್ಥಿತರಿದ್ದರು.

ವಿವಿಧ ಸಂಸ್ಥೆಗಳು ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದವು. 15 ತಂಡ ಅವರವರ ಮನೆಯೊಳಗೆ ಸಂಗ್ರಹಿಸಿಟ್ಟಿದ್ದ ವಿವಿಧ ಹಳೆ ವಸ್ತುಗಳ ಪ್ರದರ್ಶನಗಳು ಮತ್ತು ಸ್ಪರ್ಧೆಗಳನ್ನು ಪ್ರದರ್ಶಿಸಿದರು. 15 ತಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮನೆಯಲ್ಲಿ ಹಳೆ ಸಂಗ್ರಹ ಬಗ್ಗೆ ಸ್ಪರ್ಧೆ ಏರ್ಪಡಿಸಿ ಚರ್ಚ್ ಧರ್ಮ ಗುರು ಫಾ. ಸ್ಟಾನಿ ಗೋವಿಯಸ್ ಬಹುಮಾನ ವಿತರಿಸಿದರು. ಸುಮಾರು 800 ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here