ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು ಮುಂಡಾಜೆ ವಲಯದ ಕಾನರ್ಪ ಕಾರ್ಯಕ್ಷೇತ್ರದ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮುಂಡಾಜೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ತಾಲೂಕಿನ ಯೋಚನಾಧಿಕಾರಿ ಯಶೋಧರ ಅವರು ಜ್ಞಾನ ವಿಕಾಸ ಕೇಂದ್ರದ ಹುಟ್ಟು ಹಿನ್ನಲೆ ಮಹಿಳೆಯರಲ್ಲಾದ ಪರಿವರ್ತನೆ ಬಗ್ಗೆ ತಿಳಿಸುತ್ತಾ ಕೇಂದ್ರದಲ್ಲಿ ಉತ್ತಮ ಮಾಹಿತಿಗಳನ್ನೂ ನೀಡಲಾಗುತ್ತಿದ್ದು ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು. ತಾಲೂಕಿನಲ್ಲಿ 25 ಚಾಲ್ತಿ ಕೇಂದ್ರಗಳಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದು ಪ್ರಭುದ್ಧತೆಯನ್ನು ಹೊಂದಿದ ಸದಸ್ಯರಿಗೆ ಪ್ರಬುದ್ಧತೆ ನೀಡಿ ಹೊಸ ಸಂಘಗಳಿಗೆ ಹೊಸ ಕೇಂದ್ರ ಮಾಡುವರೇ ಅವಕಾಶವನ್ನು ಕಲ್ಪಿಸಲಾಗುತ್ತಿದೆ ಎಂದರು.
ಯಂಗ್ ಚಾಲೆಂಜರ್ಸ್ ಕ್ಲಬ್ ಸಂಚಾಲಕ ಹಾಗೂ ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ನಾಮದೇವ್ ಅವರು ಅವಕಾಶಗಳನ್ನು ಬಳಸಿಕೊಂಡಾಗ ಸಾಧನೆ ಸಾಧ್ಯ. ಈ ದಿನ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಹಮ್ಮಿಕೊಂಡಿದ್ದು, ಕ್ಷೇತ್ರದ ಯಾವುದೇ ಕಾರ್ಯಕ್ರಮಕ್ಕೂ ನಾವು ಜೊತೆಯಾಗಿರುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಗಣೇಶ್ ಬಂಗೇರ, ಶ್ರೀಧರ ಜೈನ್, ಒಕ್ಕೂಟ ಅಧ್ಯಕ್ಷ ಸತೀಶ್ ನಾಯ್ಕ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾನರ್ಪ ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಕಡಿರುದ್ಯಾವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಾವತಿ ವಹಿಸಿದ್ದರು. ಮೇಲ್ವಿಚಾರಕ ಜನಾರ್ದನ್ ಅವರು ಸೇವಾಪ್ರತಿನಿಧಿ ಲೀಲಾವತಿ ಉಪಸ್ಥಿತರಿದ್ದರು. ಜ್ಞಾನವಿಕಾಸ ಸಂಯೋಜಕ ಶರ್ಮಿಳ ವರದಿ ವಾಚಿಸಿದರು. ಕಾರ್ಯಕ್ರಮದಲ್ಲಿ ಸದಸ್ಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಸದಸ್ಯರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಕೇಂದ್ರದ ಸದಸ್ಯೆ ಪುಷ್ಪವತಿ ಸ್ವಾಗತಿಸಿದರು. ಸಮನ್ವಯಧಿಕಾರಿ ಮಧುರಾವಸಂತ್ ನಿರೂಪಿಸಿದರು. ರಾಧಾ ವಂದಿಸಿದರು.