ಉಜಿರೆ: ಶೋರಿನ್ ರಿಯು ಕರಾಟೆ ಅಸೋಸಿಯೇಷನ್ ಸ್ವಾಮಿಸ್ ಸೈಂಥ್ ಟ್ರೈನಿಂಗ್ ಮತ್ತು ಮಾಡಬಿದ್ರಿಯ ಎಂ.ಕೆ. ಅನಂತರಾಜ್ ದೈಹಿಕ ಶಿಕ್ಷಣ ಕಾಲೇಜು ಸಹಯೋಗದೊಂದಿಗೆ ಮಾಡಬಿದ್ರಿಯ ನೌಟ್ಸ್ ಅಂಡ್ ಗೈಡ್ಸ್ ಕನ್ನಡ ಭವನದಲ್ಲಿ ಆ. 30ರಂದು ನಡೆದ 22ನೇ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ -2025 ರಲ್ಲಿ ಉಚಿರೆಯ ಮಹಮ್ಮದ್ ರಯ್ಯಾನ್ ಬ್ರೌನ್ ಬೆಲ್ಸ್ ಫೈಟಿಂಗ್ ವಿಭಾಗದಲ್ಲಿ ಸತತ 5ನೇ ಬಾರಿ ಚಿನ್ನದ ಪದಕ ಪಡೆದಿದ್ದಾರೆ. ಅವರು ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಹಾಗೂ ಉಜಿರೆಯ ಆರ್.ಆರ್.ಸಿ.ಸಿ.ಟಿ.ವಿ ಮಾಲಕ ಬಿ.ಎಚ್. ಇಬ್ರಾಹಿಂ ಮತ್ತು ನೂರ್ ಜಹಾನ್ ದಂಪತಿ ಪುತ್ರ. ಅವರಿಗೆ ಶಿಹಾನ್ ಅಬ್ದುಲ್ ರಹ್ಮಾನ್ ತರಬೇತಿ ನೀಡಿದ್ದರು.