ಮಡಂತ್ಯಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಂತ್ಯಾರು ವಲಯ ಸೆ. 5ರಂದು ನಡೆಯುವ ಸಮಾವೇಶದ ಪೂರ್ವಭಾವಿ ಸಭೆಯನ್ನು ಮಡಂತ್ಯಾರು ಗಣಪತಿ ಮಂಟಪದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಳ್ಳಮಂಜ ದೇವಸ್ಥಾನದ ಆಡಳಿತ ಮುಖ್ಯಸ್ಥ ಹರ್ಷ ಸಂಪಿಗೆತಾಯ, ಪ್ರಗತಿ ಎಂಟರ್ ಪ್ರೈಸಸ್ ಮಾಲಕ ಜಯಂತ್ ಶೆಟ್ಟಿ, ಕೊರಿಂಜ ದೇವಸ್ಥಾನ ಆಡಳಿತ ಮುಖ್ಯಸ್ಥ ಯೋಗೀಶ್ ಕಡ್ತಿಲ, ಬಸವನಗುಡಿ ಬಸವೇಶ್ವರ ದೇವಸ್ಥಾನ ಮುಖ್ಯಸ್ಥ ಪ್ರಶಾಂತ್ ಪಾರೆಂಕಿ, ಮಹಿಷಮರ್ದಿನೀ ದೇವಸ್ಥಾನ ಮಾಜಿ ಅಧ್ಯಕ್ಷ ರತ್ನಕರ ಶೆಟ್ಟಿ ಮುಡಯೂರ್, ವಲಯ ಜನಜಾಗೃತೀ ಮಾಜಿ ಅಧ್ಯಕ್ಷ ಪುಷ್ಪಾರಾಜ್ ಜೈನ್, ಮಡಂತ್ಯಾರು ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ನ ಮಾಜಿ ಅಧ್ಯಕ್ಷ ಅರವಿಂದ ಜೈನ್, ಜನಜಾಗೃತಿ ಸದಸ್ಯ ಗೋಪಾಲ ಕೋಲಾಜೇ, ವಲಯ ಜನಜಾಗೃತಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಯೋಜನೆಯ ಜಿಲ್ಲಾ ನಿರ್ದೇಶಕ ದಿನೇಶ್, ಯೋಜನಾಧಿಕಾರಿ ಅಶೋಕ್, ಎಲ್ಲಾ ಒಕ್ಕೂಟದ ಅಧ್ಯಕ್ಷರು ಹಾಗೂ ಎಲ್ಲಾ ದೈವ ದೇವಸ್ಥಾನದ ಮುಖಂಡರು ಉಪಸ್ಥಿತರಿದ್ದರು.