ತಾಲೂಕಿನ ಪದವಿ ಪೂರ್ವ ಕಾಲೇಜುಗಳ ತ್ರೋಬಾಲ್ ಪಂದ್ಯಾಟದ ಉದ್ಘಾಟನೆ

0

ಸೆ.1ರಂದು ಬೆಳ್ತಂಗಡಿ ತಾಲ್ಲೂಕಿನ ಪದವಿ ಪೂರ್ವ ಕಾಲೇಜುಗಳ ತ್ರೋಬಾಲ್ ಪಂದ್ಯಾಟ ಕೆ.ಪಿ.ಎಸ್. ಸರಕಾರಿ ಪದವಿ ಪೂರ್ವ ಕಾಲೇಜು ಪುಂಜಾಲಕಟ್ಟೆಯಲ್ಲಿ ನಡೆಯಿತು. ಮಡಂತ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷೆ ರೂಪ ನವೀನ್ ಕಾರ್ಯಕ್ರಮ ಉದ್ಘಾಟನೆ ಮಾಡಿ ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವನೆ ಬದುಕಿನ ಸಮಸ್ತ ಬೆಳವಣಿಗೆಗೆ ಪೂರಕ ಎಂದರು.

ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ ಮುಖ್ಯ ಅತಿಥಿಯಾಗಿ ಆಗಮಿಸಿದರು. ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ದಿವಾಕರ್, ಕೀರ್ತಿ ಬಾಳಿಗ, ಉಪಾಪ್ರಾಂಶುಪಾಲ ಉದಯ ಕುಮಾರ್, ಪ್ರಭಾರ ಮುಖ್ಯಶಿಕ್ಷಕಿ ಅನಿತಾ ಬರೆಟ್ಟೋ, ಪಂದ್ಯಾಟದ ತೀರ್ಪುಗಾರರು, ದೈಹಿಕ ಶಿಕ್ಷಕರು, ಸಿ.ಆರ್.ಪಿ ಚೇತನ ಉಪಸ್ಥಿತರಿದ್ದರು.

ಪ್ರಾಂಶುಪಾಲೆ ಡಾ. ಸರೋಜಿನಿ ಆಚಾರ್ ಅಧ್ಯಕ್ಷತೆ ವಹಿಸಿದ್ದರು. ಬಾಲಕರ ವಿಭಾಗದಲ್ಲಿ ಹತ್ತು ತಂಡ, ಬಾಲಕಿಯ ವಿಭಾಗದಲ್ಲಿ 12 ತಂಡ ಭಾಗವಹಿಸಿದರು. ಹುಡುಗರ ವಿಭಾಗದಲ್ಲಿ ಸಂತ ತೆರೆಜ ಪದವಿ ಪೂರ್ವ ಕಾಲೇಜು ವಿಜೇತರಾದರು. ಹುಡುಗಿಯರ ವಿಭಾಗದಲ್ಲಿ ವಾಣಿ ಪದವಿ ಪೂರ್ವ ಕಾಲೇಜು ಪ್ರಥಮ ಸ್ಥಾನ ಪಡೆದರು. ಹುಡುಗರ ವಿಭಾಗದಲ್ಲಿ ದ್ವೀತಿಯ ಸ್ಥಾನ ಸರಕಾರಿ ಪದವಿ ಪೂರ್ವ ಬೆಳ್ತಂಗಡಿ ಮತ್ತು ಹುಡುಗಿಯರ ವಿಭಾಗದಲ್ಲಿ ದ್ವೀತಿಯ ಸ್ಥಾನ ಸಂತ ತೆರೆಜ ಪದವಿ ಪೂರ್ವ ಪಡೆದುಕೊಂಡಿದೆ. ಸಮಾರೋಪ ಸಮಾರಂಭದಲ್ಲಿ ಪಂಚಾಯತ್ ಸದಸ್ಯ ಹನೀಪ್, ಹಳೇವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ಯಾಮ್ ಪ್ರಸಾದ್ ಸಂಪಿಗೆತ್ತಾಯ, ಶಾಲಾಭಿವೃದ್ಧಿ ಸಮಿತಿ ಸದಸ್ಯ ದಿವಾಕರ್, ತಾಲ್ಲೂಕು ಕೀಡಾ ಸಂಯೋಜಕ ಸಂದೀಪ್ ಉಪಸ್ಥಿತರಿದ್ದರು. ಉಪನ್ಯಾಸಕಿ ಅನ್ನಪೂರ್ಣ ಸ್ವಾಗತಿಸಿದರು. ಸಹ ಶಿಕ್ಷಕ ಧರನೇಂದ್ರ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕಿ ಸುಪ್ರೀತ ವಂದನಾರ್ಪಣೆಗೈದರು.

LEAVE A REPLY

Please enter your comment!
Please enter your name here