ಬೆಳ್ತಂಗಡಿ: ಭಾರತೀಯ ಕಿಸಾನ್ ಸಂಘದ ಮಾಸಿಕ ಸಭೆ ಹಾಗೂ ಶ್ರೀ ಬಲರಾಮರ ಜಯಂತಿ ಆಚರಣೆ

0

ಬೆಳ್ತಂಗಡಿ: ಭಾರತೀಯ ಕಿಸಾನ್ ಸಂಘದ ಮಾಸಿಕ ಸಭೆ ಹಾಗೂ ರೈತರ ಆರಾಧ್ಯ ದೈವ ಶ್ರೀ ಬಲರಾಮರ ಜಯಂತಿಯನ್ನು ಶ್ರೀ ರಾಮಶಾಲೆ ಸುಲ್ಕೇರಿಯಲ್ಲಿ ಆ. 31ರಂದು ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಶ್ರೀಮಾನ್ ಭಾಸ್ಕರ್ ಸಾಲಿಯಾನ್ ಶಿರ್ಲಾಲು ಅಧ್ಯಕ್ಷತೆಯಲ್ಲಿ ನೆರವೇರಿಸಲಾಯಿತು.

ಭಾರತೀಯ ಕಿಸಾನ್ ಸಂಘದ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ ಅವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರಿಗೆ ಸಂಘಟನೆಯ ಬಗ್ಗೆ ಹಾಗೂ ಬಲರಾಮ ಜಯಂತಿಯ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾರ್ಯಕ್ರಮದ ಆರಂಭದಲ್ಲಿ ಬಲರಾಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸಭೆಯಲ್ಲಿ ಭಾರತೀಯ ಕಿಸಾನ್ ಸಂಘ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿಯಾದ ಅಂಬುಜಾಕ್ಷ, ಬೆಳ್ತಂಗಡಿ ಮಹಿಳಾ ಪ್ರಮುಖ್ ಶೀಲಾ, ಜಿಲ್ಲಾ ಸದಸ್ಯರಾದ ಶಿವರಾಂ ಹೆಗ್ಡೆ, ನಿತ್ಯಾನಂದ ನಾವರ, ತಾಲೂಕು ಪ್ರಧಾನ ಕಾರ್ಯದರ್ಶಿ ಲಿಂಗಪ್ಪ ಹಾಗೂ ತಾಲೂಕು ಉಪಾಧ್ಯಕ್ಷ ಜಯ ಸಾಲ್ಯಾನ್ ಬಳಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಭೆಗೆ ಬೆಳ್ತಂಗಡಿ ತಾಲೂಕಿನ ಸುಮಾರು 30 ಗ್ರಾಮಗಳ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು ಭಾಗವಹಿಸಿ ಹಲವಾರು ರೈತರ ಸಮಸ್ಯೆಯನ್ನ ಚರ್ಚಿಸಿ ಮುಂದಿನ ದಿನಗಳಲ್ಲಿ ಇಡೀ ತಾಲೂಕಿನಲ್ಲಿ ರೈತರ ಸಂಘಟನೆಯನ್ನು ಬಲಪಡಿಸುವುದೆಂದು ತೀರ್ಮಾನಿಸಲಾಯಿತು. ಹಲವಾರು ಇಲಾಖೆಗಳಿಗೆ, ಸರಕಾರಕ್ಕೆ ತಮ್ಮ ರೈತರ ಸಮಸ್ಯೆಗಳನ್ನು ಮನವರಿಕೆ ಮಾಡಿಕೊಟ್ಟು ರೈತರ ಸಮಸ್ಯೆಯನ್ನು ಪರಿಹಾರ ಮಾಡಿಸುವ ದೃಷ್ಟಿಯಲ್ಲಿ ಹೋರಾಟವನ್ನು ನಡೆಸುವ ಮೂಲಕ ನಾವು ರೈತರು ಸಂಘಟಿತರಾಗಿ ನಮ್ಮ ಹಕ್ಕುಗಳ ಬಗ್ಗೆ ಹಕ್ಕೋತಾಯವನ್ನು ಮಾಡುವುದಾಗಿ ಸಭೆಯಲ್ಲಿ ನಿರ್ಣಯಿಸಲಾಯಿತು. ಹಾಗೂ ರೈತರಿಗಾಗಿ ಒಂದು ದಿನದ ಅಭ್ಯಾಸ ವರ್ಗವನ್ನು ನಡೆಸುವುದಾಗಿ ಈ ಸಭೆಯಲ್ಲಿ ನಿರ್ಣಯಿಸಲಾಯಿತು. ಜಯಸಾಲಿಯನ್ ಅವರ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here