ಕಾಳಿಂಗನ ಮಕ್ಕಳು ರಸ್ತೆಗಿಳಿವ ಸಮಯ: ಎಚ್ಚರದಿಂದ ಓಡಾಡಿ

0

ಬೆಳ್ತಂಗಡಿ: ಭಾರತದಲ್ಲಿ ಅತಿ ಹೆಚ್ಚು ವಿಷವುಳ್ಳ ಹಾಗೂ ಅಷ್ಟೇ ಸಂಕೋಚ ಸ್ವಭಾವದ ಕಾಳಿಂಗ ಸರ್ಪಗಳು ಹೆಚ್ಚಾಗಿ ಜೂನ್ ತಿಂಗಳಲ್ಲಿ ತರಗೆಲೆಯಿಂದ ಗೂಡು ಕಟ್ಟಿ ಮೊಟ್ಟೆಗಳನ್ನಿಡುತ್ತವೆ.
ಸುಮಾರು ಅರುವತ್ತರಿಂದ ಅರುವತ್ತೈದು ದಿವಸಗಳಲ್ಲಿ ಅಂದರೆ ಅಗಸ್ಟ್ ಕೊನೇ ವಾರ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಮೊಟ್ಟೆಗಳು ಒಡೆದು ಒಂದಡಿ ಉದ್ದದ ಮರಿ ಕಾಳಿಂಗಗಳು ಹೊರಬರುತ್ತವೆ.

ಎರಡು ತಿಂಗಳು ಕಾವು ಕೊಡಲು ಕುಳಿತುಕೊಳ್ಳುವ ತಾಯಿ ಇನ್ನೇನು ಮರಿಗಳು ಹೊರಬರಲು ಕೆಲ ದಿನಗಳಿರುವಾಗ ಗೂಡನ್ನು ಬಿಟ್ಟು ದೂರ ಹೋಗುತ್ತವೆ.ಇದರಿಂದಾಗಿ ಮರಿಗಳು ಹೊರಬಂದ ತಕ್ಷಣ ಹಸಿದ ತಾಯಿಗೆ ಆಹಾರವಾಗುವುದು ತಪ್ಪುತ್ತದೆ. ಇದು ಪ್ರಕೃತಿಯ ಸಂಯೋಜನೆ.

ಅರಸಿನಮಕ್ಕಿ ಪಂಚಾಯತ್ ವ್ಯಾಪ್ತಿಯ ಹತ್ಯಡ್ಕ ಗ್ರಾಮದ ಪಲಸ್ತಡ್ಕ ಎಂಬಲ್ಲಿ ಉರಗ ಪ್ರೇಮಿ ನಿತಿನ್ ಬೈರಕಟ್ಡ ಅವರಿಗೆ ಕಂಡುಬಂದ ಎರಡು ದಿನ ಪ್ರಾಯದ ಕಾಳಿಂಗದ ಮರಿ.

LEAVE A REPLY

Please enter your comment!
Please enter your name here