
ಬೆಳ್ತಂಗಡಿ: ಕನ್ಯಾಡಿ ಜಯನಗರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘಕ್ಕೆ 2024-25ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೆ ಜಿಲ್ಲಾ ಬ್ಯಾಂಕ್ ಪ್ರೋತ್ಸಾಕ ಪ್ರಶಸ್ತಿ ನೀಡಿ ಆ. 30ರಂದು ನಡೆದ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ಮಹಾಸಭೆಯಲ್ಲಿ ಬ್ಯಾಂಕಿನ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಸಂಘದ ಅಧ್ಯಕ್ಷೆ ಸೌಮ್ಯಲತಾ ಜಯಂತ್ ಗೌಡರವರಿಗೆ ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿ ರೇವತಿಯವರಿಗೆ ನೀಡಿ ಗೌರವಿಸಿದರು.