
ನಿಡ್ಲೆ:ಪ್ರಾ.ಕೃ.ಪ. ಸ.ಸಂಘಕ್ಕೆ ಡಿ ಸಿ ಸಿ ಬ್ಯಾಂಕ್ ವಾರ್ಷಿಕ ಮಹಾ ಸಭೆಯ ಸಂಧರ್ಭದಲ್ಲಿ ಸಂಘದ ವಿಶೇಷ ಸಾಧನೆಗೆ “ವಿಶೇಷ ಪ್ರೋತ್ಸಾಹಕ ಬಹುಮಾನ” ನೀಡಿ ಗೌರವಿಸಿದೆ. ಪ್ರಶಸ್ತಿಯನ್ನು ಹತ್ಯಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾದ ಧನಂಜಯ ಗೌಡ ಮತ್ತು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪದ್ಮನಾಭ.ಪಿ ಸ್ವೀಕರಿಸಿದರು. ಸಂಘದ ಉಪಾಧ್ಯಕ್ಷ ಡೀಕಯ್ಯ ಎಂ. ಕೆ., ನಿರ್ದೇಶಕರುಗಳಾದ ವಿಜಯಲಕ್ಷ್ಮೀ, ಆನಂದ ಗೌಡ, ಧನಂಜಯ್ ಬಿ, ರಾಜು, ವಿಜಯ ಕುಮಾರ್ ಹೆಚ್ ಹಾಗೂ ಇತರರು ಉಪಸ್ಥಿತರಿದ್ದರು.