
ಬೆಳ್ತಂಗಡಿ: ಧರ್ಮಪ್ರಾಂತ್ಯಕ್ಕೆ ನೂತನ ಧರ್ಮಾಧ್ಯಕ್ಷರಾಗಿ ಮೊನ್ಸಿಂಜೋರ್ ಜೇಮ್ಸ್ ಪಟ್ಟೇರಿಲ್ ರವರು ಆಯ್ಕೆಗೊಂಡಿದ್ದು, ಆ. 30ರಂದು ಧರ್ಮಪ್ರಾಂತ್ಯದ ಪ್ರಧಾನ ದೇವಾಲಯವಾದ ಸಂತ ಲಾರೆನ್ಸ್ ಕತೀಡ್ರಲ್ ದೇವಾಲಯಕ್ಕೆ ಧರ್ಮಾಧ್ಯಕ್ಷ ಬಿಷಪ್ ಲಾರೆನ್ಸ್ ಮುಕ್ಕುಯಿಯವರ ಜೊತೆ ಆಗಮಿಸಿದ ಮೊನ್ಸಿಜೋರ್ ಜೇಮ್ಸ್ ಪಟ್ಟೇರಿಲ್ ರವರನ್ನು ಧರ್ಮ ಪ್ರಾಂತ್ಯಕ್ಕೆ ಸ್ವಾಗತಿಸಿದರು.
ಸಿರೋ ಮಲಬಾರ್ ಕ್ರೈಸ್ತ ಭಾಂದವರ ಧರ್ಮಾಧ್ಯಕ್ಷರ ಪಟ್ಟಾಭಿಷೇಕವು ನ. 5ರಂದು ನಡೆಯಲಿದೆ. ಅಲ್ಲಿಯವರೆಗೆ ಬಿಷಪ್ ಲಾರೆನ್ಸ್ ಮುಕ್ಕುಯಿಯವರೇ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾಗಿರಲಿದ್ದಾರೆ.