
ಉಜಿರೆ: ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ವತಿಯಿಂದ ಆ. 31 ರಂದು ಬೆಳಿಗ್ಗೆ 9ರಿಂದ ಉಜಿರೆ ಕೃಷ್ಣಾನುಗ್ರಹ ಸಭಾಭವನದಲ್ಲಿ ಉಜಿರೆ ವರ್ತಕರ ಕುಟುಂಬ ಮಿಲನ 2025 ನಡೆಯಲಿದೆ. ವಿವಿಧ ಆಟೋಟ ಸ್ಪರ್ಧೆಗಳು ಮತ್ತು 20 ಬಗೆಯ ತುಳುನಾಡ ಶೈಲಿಯ ತಿಂಡಿ ತಿನಸುಗಳ ಸಹ ಭೋಜನ ನಡೆಯಲಿದೆ.
ಬೆಳಿಗ್ಗೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ದೀಪ ಪ್ರಜ್ವಲನೆಯನ್ನು ವರ್ತಕರ ಸಂಘದ ಗೌರವಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಉಜಿರೆ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಅರವಿಂದ ಕಾರಂತ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಭಾರತ್ ಆಯರ್ನ್ ವರ್ಕ್ಸ್ ಪಾಂಡುರಂಗ ಬಾಳಿಗ, ಕೃಪಾ ಬೇಕರಿ ಅಂಟನಿ ಟಿ. ಪಿ., ಸನ್ ಶೈನ್ ಟ್ರೀಡರ್ಸ್ ಹಮೀದ್ ಭಾಗವಹಿಸಲಿದ್ದಾರೆ.ಮಧ್ಯಾಹ್ನ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ ಸಿಂಹ ನಾಯಕ್, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಬೆಳ್ತಂಗಡಿ ವೃತ್ತ ನಿರೀಕ್ಷಕ ಸುಬ್ಬಾಪುರ ಮಠ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಬೆಳ್ತಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ರೋನಾಲ್ಡ್ ಲೋಬೋ, ಮಡಂತ್ಯಾರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕಾರ್ಯದರ್ಶಿತುಳಸಿದಾಸ್ ಪೈ,ಸೇವಾ ಉದ್ದಿಮೆದಾರರ ಸಂಘ, ಮಡಂತ್ಯಾರು, ಉಜಿರೆ ಬೆಡ್ ಮಾರ್ಟ್ ಯು.ಎ. ಹಮೀದ್, ಮಂಜುಶ್ರೀ ಫ್ಯಾನ್ಸಿ ಕೇವಲ್ ರಾಮ್ ಮೊದಲಾದವರು ಭಾಗವಹಿಸಲಿದ್ದಾರೆ.