
ಕಲ್ಮಂಜ: ಸಚಿನ್ ಗೌಡ ಕಲ್ಮಂಜ ಅವರ ಮಾಲೀಕತ್ವದ ಪ್ರತಿಷ್ಠಿತ ಸೇವಕ್ ಸರ್ವಿಸಸ್ ಆ. 27ರಂದು ಶುಭಾರಂಭಗೊಂಡಿದೆ. ಶ್ರೀನಿವಾಸ್ ರಾವ್ ಮತ್ತು ಸುದರ್ಶನ್ ಕನ್ಯಾಡಿ ರಿಬ್ಬನ್ ಕತ್ತರಿಸುವ ಮೂಲಕ ನೂತನ ಸಂಸ್ಥೆಯನ್ನು ಉದ್ಘಾಟಿಸಿದರು. ಕಟ್ಟಡದ ಮಾಲಕ ಗಣೇಶ್ ಕೆ.ವಿ. ದೀಪ ಬೆಳಗಿಸಿ ಶುಭ ಹಾರೈಸಿದರು.
ಈ ವೇಳೆ ಮಾಲಕರ ತಂದೆ ಹೊನ್ನಪ್ಪ ಗೌಡ ಮತ್ತು ತಾಯಿ ರತ್ನಾವತಿ, ಅತಿಥಿಗಳಾದ ಸಿ.ಎಚ್. ಪ್ರಭಾಕರ್, ಸುಂದರ ಗೌಡ ಬಜಿಲ, ಗಣೇಶ್ ಬಜಿಲ,ಗೋವಿಂದ ಸುವರ್ಣ ಪೊಂಗಾರು, ವಿಶ್ವನಾಥ್ ಗೌಡ ಕನ್ನಿಕಾ, ನಿತಿನ್ ಗೌಡ ಕಲ್ಮಂಜ, ಗ್ರೇ ಸ್ಟೋನ್ ಸಂಸ್ಥೆಯ ಮಾಲಕರಾದ ರಂಜಿತ್, ಚೇತನ್ ಅಲೆಕ್ಕಿ, ವಿಶು ಡೊಂದಲೆ, ಶಿವಪ್ರಸಾದ್, ಸಂಸ್ಥೆಯ ಕಂಪ್ಯೂಟರ್ ಆಪರೇಟರ್ ಚೈತ್ರ ಮತ್ತು ಇತರರು ಉಪಸ್ಥಿತರಿದ್ದರು.