
ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ಘಟಕದಿಂದ ಆ. 23ರಂದು ನಡೆದ ವಿವಿಧ ಸಾಮಾಜಿಕ ಮತ್ತು ಶಿಕ್ಷಣಾತ್ಮಕ ಕಾರ್ಯಕ್ರಮಗಳಲ್ಲಿ ವಲಯ ಅಧ್ಯಕ್ಷ ಅಭಿಲಾಶ್ ಬಿ.ಎ. ಮತ್ತು ಅವರ ಆಪ್ತ ಕಾರ್ಯದರ್ಶಿ ರಾಘವೇಂದ್ರ ಕುಲಾಲ್ ಅವರು ಪಾಲ್ಗೊಂಡು ಕಾರ್ಯಕ್ರಮಗಳಿಗೆ ಶುಭಾಶಯ ಕೋರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆತ್ತಡ್ಕ ಶಾಲೆಯಲ್ಲಿ ಘಟಕದ ಅಧ್ಯಕ್ಷ ಡಾ. ಶೋಭಾ ಪಿ. ಅವರ ನೇತೃತ್ವದಲ್ಲಿ ವಿವಿಧ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳು ಜರುಗಿದವು.
ಶಿಬರಾಜೆ ಪಾದೆ ಬಸ್ಸು ತಂಗುದಾಣದ ನಾಮಫಲಕ ಅನಾವರಣ, ಶಿಬರಾಜೆ ಪಾದೆ ಅಂಗನವಾಡಿ ಕೇಂದ್ರಕ್ಕೆ ಕುಕ್ಕರ್ ಮತ್ತು ಕುರ್ಚಿಗಳ ಹಸ್ತಾಂತರ, ಶಾಲೆತ್ತಡ್ಕ ಶಾಲೆಗೆ ಹೊಸ ಪೋಡಿಯಂ ಹಸ್ತಾಂತರ, ಒಂದನೇ ತರಗತಿಯ ಮಕ್ಕಳಿಗೆ ಸ್ಥಿರ ಠೇವಣಿ ಪ್ರಮಾಣಪತ್ರ ವಿತರಣೆ, ಪೋಸ್ಟರ್ ಪ್ರಸ್ತುತಿ ಸ್ಪರ್ಧೆಯ ವಿಜೇತರಿಗೆ ಹಾಗೂ ಭಾಗವಹಿಸಿದವರಿಗೆ ಪ್ರಮಾಣಪತ್ರ ಹಾಗೂ ಪದಕ ವಿತರಣೆ, ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ, ಶ್ರೀಧರ್ ರಾವ್, ಪಿ.ಟಿ. ಸಬಾಸ್ಟಿನ್ ಮತ್ತು ಚಿದಾನಂದ ಎಸ್. ಹೂಗಾರ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ವಲಯ ಅಧ್ಯಕ್ಷರ ಸಮ್ಮುಖದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿದವು. ಸ್ಥಳೀಯ ಜೇಸಿಐ ಸದಸ್ಯರು, ಶಾಲಾ ಸಿಬ್ಬಂದಿ, ಪಾಲಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದರು.