ಧರ್ಮಸ್ಥಳ: ಉತ್ತರ ಕನ್ನಡದ ಕುಮಟಾ ಕೋನಳ್ಳಿ ಶ್ರೀ ವನದುರ್ಗ ದೇವಸ್ಥಾನದಲ್ಲಿ ಜು. 10ರಿಂದ ಪ್ರಾರಂಭವಾದ ಶ್ರೀ ರಾಮ ಕ್ಷೇತ್ರದ ಪೀಠಾಧೀಶ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಜಿಯವರ ಚಾತುರ್ಮಾಸ್ಯ ವೃತಾಚರಣೆಯ ಆ. 20ರಂದು ಸಮಾಪ್ತಿಗೊಂಡಿತು.

ಬೆಳಿಗ್ಗೆ ಶ್ರೀ ಗಳ ಸೀಮೋಲ್ಲಂಘನ, ಶ್ರೀ ಹನುಮಂತ ದೇವಸ್ಥಾನ ಚಂದಾವರದಲ್ಲಿ ಗಂಗಾ ಪೂಜೆ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಹರಿದ್ವಾರದ ಪಂಚದಶನಾಮ ಜುನಾ ಅಖಾಡದ ನಿಕಟ ಪೂರ್ವಮಹಾ ಮಂತ್ರಿ ಶ್ರೀ ದೇವಾನಂದ ಸರಸ್ವತಿ ಮಹಾರಾಜ್, ಕರ್ನಾಟಕ ಸರಕಾರದ ಮೀನುಗಾರಿಕೆ ಮತ್ತು ಬಂದರು ಸಚಿವ ಮಾಂಕಾಳ್ ಎಸ್. ವೈದ್ಯ ಇನ್ನಿತರ ಗಣ್ಯರು ಭಾಗವಹಿಸಿದ್ದರು.
Thanks for taking the time to talk about this, I feel strongly about it and enjoy
studying more on this topic. If possible, as you acquire experience, would you
mind updating your weblog with far more data?
Its very helpful for me.