
ಬೆಳ್ತಂಗಡಿ: ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್ ಇದರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಯುವ ಮನಸ್ಸುಗಳು ಮತ್ತು ವಿದ್ಯಾರ್ಥಿಗಳನ್ನೊಳಗೊಂಡ ಲಿಯೋ ಕ್ಲಬ್ ಬೆಳ್ತಂಗಡಿ ಇದರ ಪಡಗ್ರಹಣ ಸಮಾರಂಭವು ಬಲಿಪ ರೆಸಾರ್ಟ್ ನಡದಲ್ಲಿ ಜರುಗಿತು.
ಪದಗ್ರಹಣ ಅಧಿಕಾರಿಯಾಗಿದ್ದ ನಿಕಟಪೂರ್ವ ಲಿಯೋ ಜಿಲ್ಲಾಧ್ಯಕ್ಷೆ ಡಾ. ರಂಜಿತಾ ಶೆಟ್ಟಿ ಕಾವು ಅವರು ನೂತನ ತಂಡದ ಪದಗ್ರಹಣವನ್ನು ನೆರವೇರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿ ಜಿಲ್ಲಾ ಲಿಯೋ ಅಧ್ಯಕ್ಷೆ ಶ್ರೀನಿಧಿ ಶೆಟ್ಟಿಯವರು ಹೊಸದಾಗಿ ಸೇರ್ಪಡೆಗೊಂಡ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಾಂತ್ಯಾಧ್ಯಕ್ಷ ಲಯನ್ ಜಗದೀಶ್ಚಂದ್ರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಮುರಳಿ ಬಲಿಪ, ಕಾರ್ಯದರ್ಶಿ ಲಯನ್ ಅಮಿತಾನಂದ ಹೆಗ್ಡೆ, ಕೂಶಾಧಿಕಾರಿ ಸುಭಾಷಿನಿ, ಲಿಯೋ ಕ್ಲಬ್ಬಿನ ಮಾರ್ಗದರ್ಶಕ ಲಯನ್ ಕೃಷ್ಣ ಕೆ ಆಚಾರ್ಯ, ನಿಕಟ ಪೂರ್ವ ನಿರ್ದೇಶಕ ಡಾ.ದೇವಿ ಪ್ರಸಾದ್ ಬೊಲ್ಮಾ, ಕಳೆದ ಸಾಲಿನ ಕೋ ಶಾಧಿಕಾರಿ ಅಭಿಜ್ಞಾ ಬೊಲ್ಮಾ, ಪ್ರಸ್ತುತ ಸಾಲಿನ ಅಧ್ಯಕ್ಷೆ ಡಾ. ಭಾಷಿಣಿ, ಕೋಶಾಧಿಕಾರಿ ಗ್ಲೆನ್ ಮೋನಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿಕಟ ಪೂರ್ವ ಅಧ್ಯಕ್ಷೆ ಅಪ್ಸರಾ ರಾಮಕೃಷ್ಣ ಗೌಡ ಸ್ವಾಗತಿಸಿದರು. ಕಾರ್ಯದರ್ಶಿ ದೀಕ್ಷಿತ್ ಧನ್ಯವಾದ ನೀಡಿದರು.