
ಗೇರುಕಟ್ಟೆ: ಶ್ರೀ ಕೃಷ್ಣ ಮಹಿಳಾ ಭಜನಾ ಮಂದಿರ ವತಿಯಿಂದ ವಾರ್ಷಿಕವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಜನಾ ಕಾರ್ಯಕ್ರಮ ಮತ್ತು ಆಟೋಟ ಸ್ಪರ್ಧೆ ಆ.17. ಶ್ರೀ ಕೃಷ್ಣ ಮಹಿಳಾ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ಮಧ್ಯಾಹ್ನ ಮಹಿಳೆಯರಿಂದ ಭಜನಾ ಕಾರ್ಯಕ್ರಮ ಮಹಾಪೂಜೆ, ಪ್ರಸಾದ ವಿತರಣೆ. ನಂತರ 3ರಿಂದ 6 ವರ್ಷದ ಮಕ್ಕಳಿಗೆ ಶ್ರೀಕೃಷ್ಣ ಹಾಗೂ ರಾಧೆ ಸ್ಪರ್ಧೆ ಹಾಗೂ ಮಹಿಳೆಯರಿಂದ
ಮಡಕೆ ಒಡೆಯುವ ಮತ್ತು ವಿವಿಧ ಸ್ಪರ್ಧೆಗಳು ಜರುಗಿತು.

ಕೃಷ್ಣ ಜನ್ಮಾಷ್ಟಮಿ ಆಚರಣೆ ಸಮಿತಿ ಅಧ್ಯಕ್ಷೆ ರೇವತಿ ನಾರಾಯಣ, ಕಾರ್ಯದರ್ಶಿ ರೇಖಾರಾಘವ ಎಚ್. ಕೋಶಾಧಿಕಾರಿ ಕಲಾ ಲಿಂಗಪ್ಪ ಶೆಟ್ಟಿಗಾರ್, ಶ್ರೀ ಕೃಷ್ಣ ಮಹಿಳಾ ಸೇವಾ ಟ್ರಸ್ಟಿನ
ಅಧ್ಯಕ್ಷೆ ದೇವಕಿ, ಕಾರ್ಯದರ್ಶಿ ವಿಶಾಲಾಕ್ಷಿ ಕೆ.ಬಿ., ಕೋಶಾಧಿಕಾರಿ ಯಶವಂತಿ ಸತೀಶ್, ನಿರ್ದೇಶಕರಾದ ಜ್ಯೋತಿ ಮಧ್ವರಾಜ್, ಮೀನಾಕ್ಷಿ, ನವೀನ ರಮೇಶ, ಶಾಂತಿ ರತ್ನಾಕರ, ಮೋಹಿನಿ ಶ್ರೀಧರ, ಗುಲಾಬಿ ಕೊರಗಪ್ಪ, ರೇವತಿ ಪ್ರಭಾಕರ, ರೇವತಿ ನಾರಾಯಣ, ಸದಸ್ಯರಾದ ಸುಭಾಷಿಣಿ ಜನಾರ್ದನ ಗೌಡ ಕೆ., ವಸಂತಿ, ಅನಿತಾ ದಯಾನಂದ, ಭಜನಾ ಪರಿಷತ್ತು ಲಾಯಿಲ ವಲಯ ಅಧ್ಯಕ್ಷ ಜನಾರ್ದನ ಹಾಗೂ ಸ್ಥಳೀಯ ಸದಸ್ಯರು ಉಪಸ್ಥಿತರಿದ್ದರು.
ವಸಂತ ಮಜಲು, ಶೇಖಕ ನಾಯ್ಕ, ರಾಜೇಶ್ ಪೆಂರ್ಬುಡ, ಯೋಗೀಶ್ ಕುಮಾರ್, ವಿಜಯ ಗೌಡ ಕೆ., ಯಶೋಧರ ಶೆಟ್ಟಿ ಕೆ., ಪುರಂದರ ಜಿ., ನವೀನ್ ಗೌಡ, ಸದಾನಂದ ಶೆಟ್ಟಿ ವೈ., ರಾಘವ ಹೆಚ್., ಸತೀಶ್ ಭಂಡಾರಿ ಸಹಕರಿಸಿದರು. ಅಂಚೆ ಇಲಾಖೆ ನಿವೃತ್ತ ವಿಠ್ಠಲ ಶೆಟ್ಟಿ ಉಪ್ಪಡ್ಕ ನಿರೂಪಿಸಿದರು. ಡಾಕಯ್ಯ ಗೌಡ ಹೀರ್ಯ ವಂದಿಸಿದರು.