
ಉಜಿರೆ: ಬೆಳ್ತಂಗಡಿ ತಾಲೂಕು ಅರೆ ಭಾಷೆ ಅಭಿಮಾನಿ ಬಳಗ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷೆ ಅಭಿಮಾನಿ ಬಳಗದ ವತಿಯಿಂದ ಆ. 10ರಂದು ಆಟಿಲೊಂದು ದಿನ ಕಾರ್ಯಕ್ರಮ ನಡೆಯಿತು.
ಉಜಿರೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಸಹಕಾರಿ ರತ್ನ ಪ್ರಶಸ್ತಿ ವಿಜೇತ ಸಹಕಾರಿ ನೇತಾರ ನಿತ್ಯಾನಂದ ಮುಂಡೋಡಿ ಉದ್ಘಾಟಿಸಿದರು. ಗೌಡ ಕನ್ನಡ ಅರಭಾಷೆಯನ್ನು ಮನೆಮನೆಗಳಲ್ಲಿ ಬಳಸುವುದರಿಂದ ಬೆಳೆಸಬಹುದು ಎಂದು ಅಭಿಪ್ರಾಯಪಟ್ಟು ಆಟಿಯ ಸಂಭ್ರಮಾಚರಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಮುಖ್ಯ ಅತಿಥಿಯಾಗಿ ಮೇಲಂತಬೆಟ್ಟು ಪದವಿ ಕಾಲೇಜಿನ ಉಪನ್ಯಾಸಕಿ ಡಾ. ಶೀಲಾವತಿ ಧರ್ಮೇಂದ್ರ ಕುಮಾರ್ ಆಟಿ ತಿಂಗಳ ಮಹತ್ವದ ಬಗ್ಗೆ ತುಳು ಗಾದೆ ಒಗಟಿನ ಬಗ್ಗೆ ವಿಮರ್ಶಾತ್ಮಕವಾಗಿ ಮಾತನಾಡಿದರು.
ಅರೆ ಭಾಷೆ ಅಭಿಮಾನಿ ಬಳಗದ ವತಿಯಿಂದ ಸುಳ್ಯ ತಾಲೂಕು ಮಟ್ಟದ ಕೆಂಪೇಗೌಡ ಪ್ರಶಸ್ತಿ ವಿಜೇತರಾದ ನಿತ್ಯಾನಂದ ಮುಂಡೋಡಿ ಹಾಗೂ ಡಾಕ್ಟರೇಟ್ ಪದವಿಯನ್ನು ಪಡೆದ ಡಾ. ಶೀಲಾವತಿ ಧರ್ಮೇಂದ್ರ ಕುಮಾರ್ ರವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಅಭಿಮಾನಿ ಬಳಗದ ಅಧ್ಯಕ್ಷೆ ಲೋಕೇಶ್ವರಿ ವಿನಯ ಚಂದ್ರ ವಹಿಸಿಕೊಂಡಿದ್ದರು. ಕಾರ್ಯದರ್ಶಿ ಉಷಾ ಲಕ್ಷ್ಮಣ ಗೌಡ ಸ್ವಾಗತಿಸಿದರು. ಗೌರವ ಸಲಹೆಗಾರರಾದ ಅಶೋಕ್ ಕುಮಾರ್ ಎಂ. ಬಿ. ಸ್ವಾಗತ ಗೀತೆಯನ್ನು ಹಾಡಿದರು. ನಿವೃತ್ತ ಮೆರೇನ್ ಇಂಜಿನಿಯರ್ ಡಿ.ಎಮ್. ಗೌಡ ಆಟಿಯ ಆಚರಣೆಯ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಉಪಾಧ್ಯಕ್ಷ ಧರ್ಮೇಂದ್ರ ಕುಮಾರ್, ಕೋಶಾಧಿಕಾರಿ ವಿದ್ಯಾ ಶ್ರೀನಿವಾಸ್ ಗೌಡ ಸನ್ಮಾನ ಪತ್ರವನ್ನು ವಾಚಿಸಿದರು. ಭವ್ಯಶೀ ಕೀರ್ತಿರಾಜ್ ಕಾರ್ಯಕ್ರಮವನ್ನು ನಿರೂಪಿಸಿದರು. ಸವಿತ ಜಯದೇವ್ ಆಟಿಯ ವಿಶೇಷ ಸುಮಾರು 51 ಬಗೆ ತಿಂಡಿ ತಿನಿಸುಗಳ ಪಟ್ಟಿಯನ್ನು ವಾಚಿಸಿದರು. ಅತಿ ಹೆಚ್ಚು ಅಡುಗೆಗಳನ್ನು ತಂದವರಿಗೆ ಬಹುಮಾನ ನೀಡಲಾಯಿತು. ಜೊತೆ ಕಾರ್ಯದರ್ಶಿ ಹಷ೯ಲತಾ ವಂದನಾರ್ಪಣೆ ಮಾಡಿದರು.