ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಸ್ವಾತಂತ್ರ್ಯೋತ್ಸವದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ

0

ಬೆಳ್ತಂಗಡಿ: ರಾಷ್ಟ್ರಕ್ಕಾಗಿ ಬಲಿದಾನ ನೀಡಿದ ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ಹಾಗೂ ರಾಷ್ಟ್ರ ಪ್ರೇಮ ಇಂದಿನ ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುವಂತಿದ್ದು, ದೇಶದ ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಯುವ ಜನಾಂಗ ನಿಷ್ಠೆಯಿಂದ ಪಾಲ್ಗೊಳ್ಳಬೇಕಾಗಿದೆ ಎಂದು ರಾಷ್ಟ್ರೀಯ ಚಿಂತಕ ಲೇಖಕರಾದ ಶಿವಪ್ರಸಾದ್ ಸುರ್ಯ ಹೇಳಿದರು. ಅವರು ವಾಣಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಭಾರತದ ಇತಿಹಾಸ ಸೋಲಿನ ಇತಿಹಾಸವಲ್ಲ: ಅದು ಸಂಘರ್ಷದ ಇತಿಹಾಸ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿ ಶಕ್ತಿಯ ತ್ಯಾಗ ಅಪರಿಮಿತವಾಗಿದೆ. ಇದರಲ್ಲಿ ಮಹಿಳಾ ಶಕ್ತಿಯೂ ಸೇರಿಕೊಂಡಿದೆ. ಇಂದು ಅಂತಹ ಶಕ್ತಿಯಿಂದ ಬೆಳೆಯುತ್ತಿರುವ ಭಾರತ ವಿದೇಶಗಳಿಗೆ ಸಡ್ಡು ಹೊಡೆದು ನಿಂತಿದೆ. ಪ್ರಸ್ತುತ ಕಾಲದಲ್ಲಿ ವಿದ್ಯಾರ್ಥಿಗಳು, ವಿಜ್ಞಾನಿಗಳು, ಚಿಂತಕರು ಭಾರತದ ಇತಿಹಾಸವನ್ನು ಚಂದ್ರಗ್ರಹದವರೆಗೂ ತಲುಪಿಸಿಬಿಟ್ಟಿದ್ದಾರೆ. ವಿದೇಶದ ತಂತ್ರಜ್ಞಾನಗಳನ್ನು ಅವಲಂಬಿಸುವುದನ್ನು ಬಿಟ್ಟು ಅದನ್ನು ನಮ್ಮಲ್ಲೇ ಅಭಿವೃದ್ಧಿಪಡಿಸಿದಾಗ ರಾಷ್ಟ್ರಾಭಿವೃದ್ದಿ ಸಾಧ್ಯವಾಗುತ್ತದೆ. ಯುವಶಕ್ತಿಯು ಮೇಧಾ ಶಕ್ತಿಯಿಂದ ಭಾರತದ ಆಕಾಶಕ್ಕೆ ಕವಿದ ಮೋಡವನ್ನು ಸರಿಸಿ ಶುಭ್ರತೆಯನ್ನು ತರುವ ಸಂಕಲ್ಪವನ್ನು ಹೊಂದಬೇಕು ಎಂದರು.

ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಿ. ಕುಶಾಲಪ್ಪ ಗೌಡ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಗಣೇಶ್ ಗೌಡ, ಆಡಳಿತಾಧಿಕಾರಿ ಪ್ರಸಾದ್ ಕುಮಾರ್ ಉಪಸ್ಥಿತರಿದ್ದರು. ಕಾಲೇಜಿನ ಪ್ರಾಂಶುಪಾಲ ವಿಷ್ಣು ಪ್ರಕಾಶ್ ಎಂ. ಸ್ವಾಗತಿಸಿದರು. ಉಪನ್ಯಾಸಕ ಮಹಾಬಲ ಗೌಡ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕ ಹರ್ಷಿತ್ ಧನ್ಯವಾದವಿತ್ತರು.

LEAVE A REPLY

Please enter your comment!
Please enter your name here