
ಉಜಿರೆ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಂಡತ್ತೋಡಿ ಪೆರ್ಲದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಧ್ವಜಾರೋಹಣವನ್ನು ಎಸ್. ಡಿ. ಎಂ. ಸಿ ಅಧ್ಯಕ್ಷ ದೇವರಾಜ್ ಪೂಜಾರಿ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಶಂಕರ್ ನಾರಾಯಣ್ ಭಟ್ ಮುಂಡತೋಡಿ, ಜಿ. ಪಂ. ಮಾಜಿ ಸದಸ್ಯೆ ಚಂದ್ರಕಲಾ, ಗ್ರಾ. ಪಂ. ಸದಸ್ಯ ಗುರುಪ್ರಸಾದ್ ಕೋಟ್ಯಾನ್, ಸಿ.ಕೆ. ನಿವೃತ್ತ ಶಿಕ್ಷಕ ನಾರಾಯಣ್ ಭಟ್, ಗೆಳೆಯರ ಬಳಗದ ಅಧ್ಯಕ್ಷ ವೆಂಕಪ್ಪ ಉಪಸ್ಥಿತರಿದ್ದರು.
ಉಪಾಧ್ಯಕ್ಷೆ ಪವಿತ್ರ ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಪ್ರಾಸ್ತವಿಕ ಮಾತನ್ನಾಡಿದರು. ಗೆಳೆಯರ ಬಳಗದ ವತಿಯಿಂದ ಮಕ್ಕಳಿಗೆ ಐ.ಡಿ., ಬೆಲ್ಟ್ ಮತ್ತು ಟೈ ವಿತರಿಸಲಾಯಿತು. ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷೆ ರೇವತಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಸೇವಂತಿ ಸ್ವಾಗತಿಸಿದರು. ಶಿಕ್ಷಕಿ ಉಷಾಲತ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಪ್ರೀತಿ ದಿನದ ಮಹತ್ವ ತಿಳಿಸಿದರು. ಪೋಷಕರು ಎಸ್.ಡಿ.ಎಂ.ಸಿ. ಸದಸ್ಯರು ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.