
ಬೆಳ್ತಂಗಡಿ: ಬೀಟ್ ರಾಕರ್ಸ್ ಡಾನ್ಸ್ ಅಕಾಡೆಮಿ ಸಂಸ್ಥೆಯಲ್ಲಿ ಮೊದಲ ವರ್ಷದ ಆಟಿದ ರಂಗ್ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ನೆರವೇರಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸ್ಥೆಯ ನಿರ್ದೇಶಕ ಜಿತೇಶ್ ಕುಮಾರ್ ಅವರ ತಾಯಿ ರೇವತಿ ಅವರು ನೆರವೇರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಪೆರ್ಲ ಮುಂಡತೋಡಿ ಶಾಲೆಯ ಮುಖ್ಯ ಶಿಕ್ಷಕಿ ಸೇವಂತಿ, ಮುಖ್ಯ ಅತಿಥಿಯಾಗಿ ಬೆಳ್ತಂಗಡಿ ಮಂಜುಶ್ರೀ ಜೆಸಿಐ ಅಧ್ಯಕ್ಷೆ ಆಶಾಪ್ರಶಾಂತ್, ಕಲ್ಪತರು ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಚಂದ್ರಿಕಾ, ಯುವವಾಹಿನಿ ಅಧ್ಯಕ್ಷ ಗುರುರಾಜ್ ಗುರಿಪಳ್ಳ ಅವರು ಭಾಗವಹಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದ್ಯಾರ್ಥಿ ಹಾಗೂ ಪೋಷಕರು ಭಾಗವಹಿಸಿ ಸುಮಾರು 40ಬಗೆಯ ತಿಂಡಿ ತಿನಿಸುಗಳು ವಿಶೇಷ ಆಕರ್ಷಣೆಯಾಗಿತ್ತು.
ಹರ್ಷಿಕ ಪ್ರಾರ್ಥಿಸಿದರು. ಎಸ್.ಡಿ.ಎಂ ಶಾಲಾ ಶಿಕ್ಷಕಿ ಸೌಮ್ಯ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶ್ವೇತಾ ನಿರೂಪಿಸಿದರು. ಜಿತೇಶ್ ಕುಮಾರ್ ವಂದಿಸಿದರು.