
ಮಿತ್ತಬಾಗಿಲು: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ವತಿಯಿಂದ ಪಕ್ಷ ಸಂಘಟನಾ ದೃಷ್ಟಿಯಿಂದ ಆ. 10ರಂದು ನಡೆದ ಮಿತ್ತಬಾಗಿಲು ಶಕ್ತಿ ಕೇಂದ್ರ ಪಂಚಾಯತ್ ಮಟ್ಟದ ಸಭೆ ಕುಕ್ಕಾವು ಶ್ರೀ ಸದಾಶಿವೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಹಿರಿಯ ಕಾರ್ಯಕರ್ತ ವಾಸುದೇವ ರಾವ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಶಾಸಕ ಹರೀಶ್ ಪೂಂಜ ಅವರು ಪಾಲ್ಗೊಂಡು ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆ ಮತ್ತು ಕಾರ್ಯಚಟುವಟಿಕೆಯ ಕುರಿತು ವಿಸ್ತ್ರುತವಾಗಿ ಸಮಾಲೋಚನೆ ನಡೆಸಿದರು.
ಯುವ ವಕೀಲ ಯತೀಶ್ ಪಣೆಕ್ಕರ, ಮಂಡಲ ಉಪಾಧ್ಯಕ್ಷ ಸದಾನಂದ ಪೂಜಾರಿ ಉಂಗಿನಬೈಲ್, ವೃಷಾoಕ್ ಖಾದಿಲ್ಕರ್ ಬೈಠಕ್ ನೀಡಿದರು. ಲಾಯಿಲ ಮಹಾಶಕ್ತಿ ಕೇಂದ್ರ ಕಾರ್ಯದರ್ಶಿ ಅರವಿಂದ್ ಲಾಯಿಲ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ್ ಗೌಡ ನಾವೂರು, ಮಂಡಲ ಉಪಾಧ್ಯಕ್ಷ, ಅಭ್ಯಾಸ ವರ್ಗ ಸಂಚಾಲಕರಾದ ಕೊರಗಪ್ಪ ಗೌಡ ಚಾರ್ಮಾಡಿ, ಪ್ರಭಾರಿ ಗಿರೀಶ್ ಡೊಂಗ್ರೆ, ಮಿತ್ತಬಾಗಿಲು ಪಂಚಾಯತ್ ಅಧ್ಯಕ್ಷ ವಿನಯ ಚಂದ್ರ, ಶಕ್ತಿ ಕೇಂದ್ರ ಪ್ರಮುಖರು, ಜನಪ್ರತಿನಿಧಿಗಳು, ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.