
ಆರಂಬೋಡಿ: ಗ್ರಾಮ ಪಂಚಾಯತಿನ 2025- 26ನೇ ಸಾಲಿನ ಮೊದಲ ಗ್ರಾಮ ಸಭೆಯು ಆ. 11ರಂದು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಪ್ರಾರಂಭ ಮಾಡುವ ಸಂದರ್ಭದಲ್ಲಿ ಗ್ರಾಮಸ್ಥರು ಎಲ್ಲಾ ಇಲಾಖೆಯ ಅಧಿಕಾರಿಗಳು, ಎಲ್ಲಾ ಸದಸ್ಯರೂ ಸಭೆಯಲ್ಲಿ ಭಾಗವಹಿಸದೇ ಇದ್ದುದರಿಂದ ಈ ಗ್ರಾಮ ಸಭೆ ಮುಂದೂಡಬೇಕು ಎಲ್ಲಾ ಅಧಿಕಾರಿಗಳು ಬರುವಂತೆ ಮಾಡಿ ದಿನ ನಿಗದಿ ಮಾಡಿ ಎಂದು ಒತ್ತಾಯಿಸಿದರು.
ಸ್ವಲ್ಪ ಸಮಯ ಚರ್ಚೆ ನಡೆದು ಮಾರ್ಗದರ್ಶಿ ಅಧಿಕಾರಿ ಬೆಳ್ತಂಗಡಿ ಪಶು ಆಸ್ಪತ್ರೆಯ ಆಡಳಿತ ಮುಖ್ಯ ಪಶು ವೈದ್ಯಾಧಿಕಾರಿ ಡಾ. ರವಿ ಕುಮಾರ್, ಪಂಚಾಯತ್ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್ ಗ್ರಾಮ ಸಭೆ ಮುಂದೂಡಲಾಗುವುದು ಎಂದು ಘೋಷಣೆ ಮಾಡಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ. ಸ್ಮೃತಿ ಯು. ಮುಂದಿನ ಗ್ರಾಮ ಸಭೆ ಆ. 19ರಂದು ನಡೆಯಲಿದೆ ಎಂದು ತಿಳಿಸಿದರು.