
ಕನ್ಯಾಡಿ: ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಸೇವಾಧಾಮ ಪುನಶ್ಚೇತನ ಕೇಂದ್ರದ ಮೂಲಕ ಪುನಶ್ಚೇತನವನ್ನು ನೀಡುತ್ತಾ ಹಾಗೆ ಆರೋಗ್ಯ ತಪಾಸಣಾ, ರಕ್ತದಾನ ಶಿಬಿರ, ಮಹಿಳಾ ಸಬಲೀಕರಣ ಹೀಗೆ ಹಲವಾರು ಸೇವಾ ಚಟುವಟಿಕೆಗಳನ್ನು ನಡೆಸುತ್ತಿರುವ ಕನ್ಯಾಡಿ ಸೇವಾಭಾರತಿ ಖಜಾಂಚಿ ಮತ್ತು ಸೇವಾಧಾಮ ಸಂಸ್ಥಾಪಕ ಕೆ. ವಿನಾಯಕ ರಾವ್ ರವರನ್ನು ಮಂಗಳೂರು ಕಸ್ತೂರ್ಬಾ ಮೆಡಿಕಲ್ ಕಾಲೇಜು ಆಯೋಜಿಸಿದ ಇಂಡಿಯನ್ ಆರ್ಥೋಪೆಡಿಕ್ ಅಸೋಸಿಯೇಷನ್ ಮೂಳೆ ಮತ್ತು ಕೀಲು ದುರ್ಬಲತೆ – 2025 ಕಾರ್ಯಕ್ರಮದಲ್ಲಿ IOA ಸುವರ್ಣ ಸಾಧಕ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದ್ದಾರೆ.
ಅಸಿಸ್ಟೆಂಟ್ ಪ್ರೊಫೆಸರ್ ಡಾ.ಚೇತನ್ ಶೆಟ್ಟಿ, ಪ್ರೊಫೆಸರ್ ಮತ್ತು HOD, ಡಿಪಾರ್ಟ್ಮೆಂಟ್ ಆಫ್ ಆರ್ಥೋಪೆಡಿಕ್ ಡಾ. ಆತ್ಮಾನಂದ ಹೆಗ್ಡೆ, ಅಸೋಸಿಯೇಟ್ ಪ್ರೊಫೆಸರ್ ಮತ್ತು ಸ್ಪೈನ್ ಸರ್ಜನ್ ಡಾ. ಈಶ್ವರಕೀರ್ತಿ ಸಿ, ಸ್ಪೈನ್ ಸರ್ಜನ್ ಡಾ. ವೈಶಾಕ್ ಭಟ್, ಅಸಿಸ್ಟೆಂಟ್ ಪ್ರೊಫೆಸರ್ ಡಾ. ಕೀರ್ತನ್ ರಂಗ ನಾಯಕ್ ರವರು ಉಪಸ್ಥಿತರಿದ್ದರು.