ನಾಳ: ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭೆ

0

ಗೇರುಕಟ್ಟೆ: ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆ.8ರಂದು ಜರುಗಿತು.

ಹಿಂದೂ ಧರ್ಮ, ರಾಷ್ಟ್ರೀಯ ಪ್ರೇಮ, ಪರಿಸರ ಸ್ನೇಹಿ, ಧಾರ್ಮಿಕ,ಸಂಸ್ಕಾರ ಹಿಂದು ಧರ್ಮದ ಪ್ರಜ್ಞೆ,ಜಾಗ್ರತಿ ಶಿಕ್ಷಣ ಮಕ್ಕಳಿಗೆ ಬಾಲ್ಯದಲ್ಲೇ ಮೈಗೂಡಿಸುವ ಕೆಲಸ ಪೋಷಕರಿಂದ ಪ್ರತಿಯೊಂದು ಮನೆಯಲ್ಲಿ ಆಗಬೇಕು ಎಂದು ಶಿಕ್ಷಕಿ,ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯೆ ವಿಜಯ ಬಿ.ಶೆಟ್ಟಿ ಸಾಲೆತ್ತೂರು ಧಾರ್ಮಿಕ ಉಪನ್ಯಾಸ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಬಂಧು,ಜ್ಞಾನ ವಿಕಾಸ,ಸ್ವಸಹಾಯ ಸಂಘ ಒಕ್ಕೂಟ ನ್ಯಾಯತರ್ಪು-ಕಳಿಯ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ ದೇವಸ್ಥಾನದ ಅನ್ನಪೂರ್ಣ ಛತ್ರ ಸಭಾಂಗಣದಲ್ಲಿ ಆ.8 ರಂದು ಜರಗಿತು.

ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಪುಷ್ಪ ಉದಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ತಂಗಡಿ ಕೇಂದ್ರ ಪ್ರಗತಿ ಬಂಧು ಒಕ್ಕೂಟ ಅಧ್ಯಕ್ಷ ಸೀತಾರಾಮ ಎಂ.,
ಬೆಳ್ತಂಗಡಿ ಶ್ರೀ.ಕ್ಷೇ.ಧ.ಗ್ರಾ.ಯೋ. ಬಿ.ಸಿ.ಟ್ರಸ್ಟ್ ಯೋಜನಾಧಿಕಾರಿ ಯಶೋಧರ,ನಾಳ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್ ಬಿ.,ವ್ಯವಸ್ಥಾಪನ ಸಮಿತಿ ಮಾಜಿ ಸದಸ್ಯ ಹಿರಿಯರಾದ ಜನಾರ್ದನ ಪೂಜಾರಿ ಉಪಸ್ಥಿತರಿದ್ದರು.

ವರಮಹಾಲಕ್ಷ್ಮೀ ಪೂಜಾ ಸಮಿತಿ ನಿಕಟಪೂರ್ವಾ ಅಧ್ಯಕ್ಷರಾದ ಮೀನಾಕ್ಷಿ ರಾಧಾಕೃಷ್ಣ,ಸಮಿತಿ ಉಪಾಧ್ಯಕ್ಷೆ ಅನುಪಮ ಸತೀಶ್, ಕಾರ್ಯದರ್ಶಿ ವಿನೋದ,ಜತೆ ಕಾರ್ಯದರ್ಶಿ ಸೌಮ್ಯ ವಿ.ಶೆಟ್ಟಿ., ಒಕ್ಕೂಟದ ಅಧ್ಯಕ್ಷರಾದ ಸಿದ್ದಪ್ಪ ಗೌಡ, ಶಾಲಿನಿ ಸತೀಶ್, ಸುಭಾಷಿಣಿ ಕೆ.ಜನಾರ್ದನ ಗೌಡ, ಪ್ರತಿನಿಧಿ ಸುಮಿತ್ರ ಎಸ್.ಶೆಟ್ಟಿ,ಸ್ವಸಹಾಯ ಪ್ರಗತಿ ಬಂಧು ಕಳಿಯ,
ನ್ಯಾಯತರ್ಪು ಒಕ್ಕೂಟದ ಪದಾಧಿಕಾರಿಗಳು,ಸದಸ್ಯರು,ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ಅಭಿವೃದ್ಧಿ ಸಮಿತಿ, ಭಜನಾ ಮಂಡಳಿ,ಮಹಿಳಾ ಮಂಡಳಿ ಹಾಗೂ ವಿವಿಧ ಸಂಘದ ಪದಾಧಿಕಾರಿಗಳು ಮತ್ತಿತರರಿದ್ದರು.

ಸನ್ಮಾನ: ಪೂಜಾ ಸಮಿತಿ ವತಿಯಿಂದ ಅನ್ನದಾನ ಸೇವಾಕರ್ತರಾದ ಆನಂದ ಗೌಡ ದಂಪತಿ ನೆರಿಯ, ಹೇಮಂತ್ ಕುಮಾರ್ ಮೈಸೂರು, ಸೀತಾರಾಮ ಎಂ.ಹುಣ್ಸೆಕಟ್ಟೆ, ಸತೀಶ್ ಭಂಡಾರಿ ದಂಪತಿ ನಾಳ, ಪುಷ್ಪಾ ಉದಯ ಗೇರುಕಟ್ಟೆ ದಂಪತಿಗಳನ್ನು ಸನ್ಮಾನಿಸಿ, ಗೌರವಿಸಿದರು. ಬೆಳ್ತಂಗಡಿ ವಲಯ ಮೇಲ್ವಿಚಾರಕ ಜಿ.ರವಿ ಸ್ವಾಗತಿಸಿದರು. ರಾಜೇಶ್ ಪೆಂರ್ಬುಡ ನಿರೂಪಿಸಿದರು.ಕಳಿಯ ಸೇವಾ ಪ್ರತಿನಿಧಿ ಸೌಮ್ಯ ವಿ.ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here