
ಬೆಂದ್ರಾಳ: ಸೈಂಟ್ ಸಾವಿಯೋ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಭೆ ಮಾಡಲಾಯಿತು. ಸಭೆಯ ಉದ್ಘಾಟನೆಯನ್ನು ಸೈಂಟ್ ಆಂಟನಿ ಚರ್ಚ್ ತೋಟತ್ತಾಡಿಯ ಧರ್ಮಗುರು ಫಾದರ್ ಜೋಸ್ ಪೂವತ್ತಿಂಗಲ್ ಮಾಡಿದರು. ಶಾಲಾ ರಕ್ಷಕ ಶಿಕ್ಷಕ ಸಂಘದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಬೇಬಿ ಜೋಸೆಫ್ ಆಯ್ಕೆಯಾದರು. ನಂತರ ಶಾಲಾ ಮುಖ್ಯ ಶಿಕ್ಷಕಿ ಸಿಸ್ಟರ್ ಮರಿಯಾ ರೆಜಿನ ಈ ಶೈಕ್ಷಣಿಕ ವರ್ಷದಲ್ಲಿ ನಡೆಯಬೇಕಾಗಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.