
ಬೆಳ್ತಂಗಡಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶಿಶು ಅಭಿವೃದ್ಧಿ ಯೋಜನೆ ಬೆಳ್ತಂಗಡಿ ಯೋಜನಾ ವ್ಯಾಪ್ತಿಯ 12 ವಲಯದಲ್ಲಿ ಹಿರಿಯ ವಿದ್ಯಾರ್ಥಿಗಳ ತಂಡಗಳು ಈಗಾಗಲೇ ರಚನೆಯಾಗಿದ್ದು, ಆ. 7ರಂದು ತಾಲೂಕು ಮಟ್ಟದ ಕಾರ್ಯಕ್ರಮಕ್ಕೆ ಪ್ರತಿ ಹಿರಿಯ ವಿದ್ಯಾರ್ಥಿಗಳ ತಂಡದಿಂದ ವಿದ್ಯಾರ್ಥಿಗಳನ್ನು ಆಹ್ವಾನಿಸಿದ್ದು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಿಯ ಅಗ್ನೇಸ್ ಹಾಗೂ ಅಭಿವೃದ್ಧಿ ಯೋಜನಾಧಿಕಾರಿಗಳು ಹಿರಿಯ ವಿದ್ಯಾರ್ಥಿಗಳ ತಂಡದ ರಚನೆ ಮಹತ್ವ ಮಕ್ಕಳ ಸರ್ವತೋಮುಖ ಬೆಳವಣಿಗೆ ಅಂಗನವಾಡಿ ಕೇಂದ್ರ ಭದ್ರ ಬುನಾದಿಯಾಗಿದೆ.

ಅಂಗನವಾಡಿಯ ಅಭಿವೃದ್ಧಿಗೆ ಇಲಾಖೆಯ ಸಹಕಾರದೊಂದಿಗೆ ಹಿರಿಯ ವಿದ್ಯಾರ್ಥಿಗಳ ತಂಡದ ಸಹಕಾರ ಅತ್ಯಗತ್ಯವಾಗಿದೆ ಅಂಗನವಾಡಿ ಉಳಿವಿಕೆಗೆ ಹಿರಿಯ ವಿದ್ಯಾರ್ಥಿಗಳ ತಂಡ ಬಲವಾಗಿ ನಿಲ್ಲಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಿರಿಯ ವಿದ್ಯಾರ್ಥಿಗಳ ಪ್ರತಿನಿಧಿಯಾಗಿ ಸಂದೀಪ್ ರವರ ಕಾರ್ಯಕ್ರಮದ ಉದ್ಘಾಟಕರಾಗಿ ಹಿರಿಯ ವಿದ್ಯಾರ್ಥಿಗಳು ಅಂಗನವಾಡಿ ಅಭಿವೃದ್ಧಿಗೆ ಕೊಡುಗೆಗಳನ್ನು ನೀಡಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಾಣಿಶ್ರೀ ಹಿರಿಯ ಮೇಲ್ವಿಚಾರಕಿ ಎಲ್ಲರನ್ನು ಸ್ವಾಗತಿಸಿದರು. ಸುಮನ ಮೇಲ್ವಿಚಾರಕಿ ಪ್ರಸ್ತಾವಿಕವಾಗಿ ಮಾತನಾಡಿದರು. ಅನ್ನಪೂರ್ಣ ಮೇಲ್ವಿಚಾರಕಿ ಕಾರ್ಯಕ್ರಮ ನಿರೂಪಿಸಿದರು. ಲಲಿತ ಮೇಲ್ವಿಚಾರಕಿ ಆಟದ ಮೂಲಕ ವಿದ್ಯಾರ್ಥಿಗಳನ್ನು ಪರಸ್ಪರ ಪರಿಚಯ ಮಾಡಿಸಿದರು. ಗುಲಾಬಿ ಮೇಲ್ವಿಚಾರಕಿ ಎಲ್ಲರಿಗೂ ವಂದಿಸಿದರು.