
ಉಜಿರೆ: ಆ.9ರಂದು ರಕ್ಷಾಬಂಧನ ಹಬ್ಬದ ಅಂಗವಾಗಿ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್.ಇ), ಉಜಿರೆ ಇಲ್ಲಿ ವಿದ್ಯಾರ್ಥಿಗಳಿಂದ ಹಬ್ಬದ ಮಹತ್ವವನ್ನು ತಿಳಿಸಲಾಯಿತು. ಹಾಗೂ ಅಣ್ಣ ತಂಗಿ ಬಾಂಧವ್ಯದ ಕುರಿತು ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ ಹಾಗೂ ನೃತ್ಯ ಮಾಡಿ ಪರಸ್ಪರ ತಮ್ಮ ಸಹಪಾಠಿಗಳಿಗೆ ಹಾಗೂ ಸಹೋದರರಿಗೆ ಸಿಹಿ ಹಂಚಿ ರಕ್ಷೆಯನ್ನು ಕಟ್ಟಿ ಹಬ್ಬದ ಆಚರಣೆ ಮಾಡಲಾಯಿತು.
ಶಾಲಾ ಪ್ರಾಂಶುಪಾಲರಾದ ಮನ್ಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಧೃತಿ ಕಾರ್ಯಕ್ರಮ ನಿರೂಪಿಸಿದರು.