
ಉರುವಾಲು: 10ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಕಾರ್ಯಕ್ರಮವು ಬಾಕಿಮಾರು ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ಕಾರಿಂಜದಲ್ಲಿ ಆ.8ರಂದು ನಡೆಯಿತು.
ಬೆಳಗ್ಗೆ ವರಮಹಾಲಕ್ಷ್ಮಿ ಕಲಶ ಪ್ರತಿಷ್ಠೆ ಹಾಗೂ ಶ್ರೀ ವಿಘ್ನೇಶ್ವರ ಭಜನಾ ಮಂಡಳಿ ಕಾರಿಂಜ ಬಾಕಿಮಾರು ಅವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ವರಮಹಾಲಕ್ಷ್ಮಿ ಪೂಜೆ ಮಾಡುವುದು ನಮ್ಮೆಲ್ಲರಲ್ಲಿ ಒಂದು ಒಗ್ಗಟ್ಟಿನ ಭಾವನೆ ಬರುತ್ತದೆ.ಮನಸ್ಸಿಗೆ ಶಾಂತಿ, ನೆಮ್ಮದಿ, ಆರೋಗ್ಯ ಕೂಡ ಹೆಚ್ಚಾಗುತ್ತದೆ, ಧಾರ್ಮಿಕತೆ ಹಾಗೂ ಸಂಸ್ಕೃತಿ ಬೆಳೆಯುತ್ತಿದೆ.ವರ್ಷಂಪ್ರತಿ ನಡೆಯುವ ಈ ಪೂಜೆಯನ್ನು ನಿಲ್ಲಿಸದೇ ಪ್ರತಿ ವರ್ಷ ಮಾಡುತ್ತಾ ಬರಬೇಕು ಎಂದು ಕಾರ್ಯಕ್ರಮದ ಧಾರ್ಮಿಕ ಭಾಷಣಕಾರರಾಗಿ ನೆಲ್ಲಿಕಟ್ಟೆ ಅಂಬಿಕಾ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವಿಷ್ಣು ಪ್ರದೀಪ್ ನಿಡ್ಡಾಜೆ ಹೇಳಿದರು.

ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಿರಿಜ ಉದ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಉಪನ್ಯಾಸಕ ವಿಷ್ಣು ಪ್ರದೀಪ್ ನಿಡ್ಡಾಜೆ, ಪ್ರಗತಿಪರ ಕೃಷಿಕ ದಾಸಪ್ಪ ಗೌಡ ಕೋಡಿಯಡ್ಕ ಹಾಗೂ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಸದಸ್ಯೆ ಶಶಿಪ್ರಭಾ ಪೆದಮಲೆ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯೆ ಉಮಾವತಿ, ವಿಘ್ನೇಶ್ವರ ಭಜನಾ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ ಗೌಡ ನೀನಿ,ಕೊರಿಂಜ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದಾಸಪ್ಪ ಗೌಡ ಕೋಡಿಯಡ್ಕ, ಶ್ರೀ ಕೃಷ್ಣ ಸೇವಾ ಸಮಿತಿಯ ಅಧ್ಯಕ್ಷರಾದ ಹೇಮಂತ ಸಿ. ಚೆಂಡೆತ್ತಿಮಾರು, ವರಮಹಾಲಕ್ಷ್ಮೀ ಪೂಜೆಯ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಯಶ್ವಿ ಮತ್ತು ಪಲ್ಲವಿ ಅವರು ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ದಿನೇಶ ನಾಯ್ಕ ನೀನಿ ಇವರು ಸ್ವಾಗತಿಸಿ, ಪ್ರದೀಪ್ ನಾಯ್ಕ ಆನಡ್ಕ ಅವರ ನಿರೂಪಣೆಯೊಂದಿಗೆ ಹಾಗೂ ತೇಜಸ್ವಿನಿ ಕೋಡಿ ಇವರ ಧನ್ಯವಾದಗಳೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು.