
ಧರ್ಮಸ್ಥಳ: ನೂರಾರು ಶವಗಳನ್ನು ಹೂತಿಟ್ಟಿದ್ದೇನೆಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.8ರಂದು ಮುಸುಕುಧಾರಿ ಸ್ಥಳ ಗುರುತಿಸಿ 15ನೇ ಗುರುತಿನ ಉತ್ಖನನ ಕಾರ್ಯ ನಡೆಯಿತು.
ಧರ್ಮಸ್ಥಳದಿಂದ ಮೂರು ಕಿ.ಮೀ. ದೂರದಲ್ಲಿರುವ ಗೋಂಕ್ರಥಾರ್ ಅರಣ್ಯ ಭಾಗ ರಸ್ತೆಯಿಂದ ಐನೂರು ಮೀಟರ್ ದೂರದಲ್ಲಿರುವ ಸ್ಪಾಟ್ ಆಗಿದೆ. ಇಂದೇ ಸ್ಥಳ ಗುರುತು ಮಾಡಿ ಇಂದೇ ಸ್ಥಳ ಉತ್ಖನನ ಕಾರ್ಯಾಚರಣೆ ನಡೆಯಿತು.
ಗುರುತು 15ನೇ ಸ್ಥಳದತ್ತ ಸ್ಥಳಕ್ಕೆ ಎಸಿ ಸ್ಟೆಲ್ಲಾ ವರ್ಗೀಸ್, ಎಸ್ಪಿ ಜಿತೇಂದ್ರ ಕುಮಾರ್ ದಯಾಮಾ, ಎಸ್. ಎಸ್. ಎಲ್. ಸೋಕೋ, ಪೊಲೀಸರು ಒಳಗೊಂಡ ಎಸ್.ಐ. ಟಿ ತಂಡ ತೆರಳಿದ್ದು , ಸ್ಥಳಕ್ಕೆ ಯಾರೂ ಹೋಗದಂತೆ ಪೊಲೀಸರ ಭದ್ರತೆ ಸ್ಥಳದಲ್ಲಿ ಸುಮಾರು 100ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿತ್ತು ಆದರೆ ಇಂದು ನಡೆದ ಕಾರ್ಯಾಚರಣೆಯಲ್ಲಿ ಯಾವುದೇ ಶವದ ಅವಶೇಷಗಳು ಪತ್ತೆಯಾಗಿಲ್ಲ.