
ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆ. 5ರಂದು ಶಾಲಾ ಪಾಲಕರ ಹಬ್ಬವನ್ನು ಆಚರಿಸಲಾಯಿತು. ಶಾಲಾ ಪಾಲಕರ ಪ್ರತಿಮೆಗೆ ಭಕ್ತಿಪೂರ್ವಕವಾಗಿ ಮಾಲಾರ್ಪಣೆ ಮಾಡುವುದರ ಜೊತೆಗೆ ಪುಷ್ಪಾರ್ಚನೆಗೈಯಲಾಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕೋಡಿಯಾಲ್ ಬೈಲ್ ಮುದ್ರಣಾಲಯದ ನಿರ್ದೇಶಕ ಫಾ.ವಿನ್ಸೆಂಟ್ ವಿನೋದ್ ಸಲ್ದಾನ ಆಗಮಿಸಿದ್ದರು. ಶಾಲಾ ಸಂಚಾಲಕ ಫಾ. ವಾಲ್ಟರ್ ಡಿಮೆಲ್ಲೋರವರು ಮಕ್ಕಳು ಶಾಲಾ ಶೈಕ್ಷಣಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ತಿಳಿಸಿ ಆಶೀರ್ವದಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಫಾ. ಕ್ಲಿಫರ್ಡ್ ಪಿಂಟೋ ಅವರು ಶಾಲಾ ಪಾಲಕರ ದಿನದ ಮಹತ್ವವನ್ನು ತಿಳಿಸಿ ಶುಭ ಹಾರೈಸಿದರು. 7ನೇ ಹಾಗೂ 5ನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನಡೆಸಿಕೊಟ್ಟರು. ನೃತ್ಯ ಮತ್ತು ರೂಪಕದ ಮೂಲಕ ಪಾಲಕರ ದಿನದ ಮಹತ್ವವನ್ನು ಪ್ರಸ್ತುತಪಡಿಸಿ ಎಲ್ಲರನ್ನು ಮನರಂಜಿಸಿದರು.
ಕಾರ್ಯಕ್ರಮದಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಾಲ್ಡರ್ ಮೋನಿಸ್ ಹಾಗೂ ಕಾರ್ಯದರ್ಶಿ ಗಿಲ್ಬರ್ಟ್ ಡಿಸೋಜ, ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ರಿಚರ್ಡ್ ಸಿಕ್ವೇರಾ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಹಾ ಫಾತಿಮಾ ಶಾಲಾ ಪಾಲಕರ ದಿನದ ಮಹತ್ವವನ್ನು ತಿಳಿಸಿದರು. ಸ್ವರ ಮತ್ತು ಆರನ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು. ಸಹಶಿಕ್ಷಕಿಯರಾದ ರೆನಿಟ ಲಸ್ರಾದೊ ಮತ್ತು ಎಲ್ವಿಟ ಪಾಯ್ಸ್ ಸಹಕರಿಸಿದರು. ವಿದ್ಯಾರ್ಥಿಗಳಾದ ಅಪೂರ್ವ ಸಣಕಲ್ ಸ್ವಾಗತಿಸಿ, ಯೂಸುಫ್ ಹಯಾನ್ ವಂದಿಸಿದರು.