
ಬೆಳ್ತಂಗಡಿ: ಪರಿವರ್ತನಾಶೀಲವಾದ ಪ್ರಪಂಚದಲ್ಲಿ ಬದುಕೆನ್ನುವುದು ಪ್ರವೃತ್ಯಾತ್ಮಕ ನೈಜ ಪ್ರವಾಹ ಚೇತನ ಅದರ ಕೇಂದ್ರ ಇಂದಿನ ಸಮಾಜಕ್ಕೆ ಅವಕಾಶಗಳು ಮುಕ್ತವಾಗಿದೆ. ಚೇತನವನ್ನು ಕೇಂದ್ರವಾಗಿರಿಸಿಕೊಂಡು, ವೃತ್ತಿ ನಿರಂತರ ಮಾರ್ಗದರ್ಶನದೊಂದಿಗೆ ಶ್ರದ್ದೆ, ಅಭ್ಯಾಸದೊಂದಿಗೆ ಮಂಡುವರಿದಲ್ಲಿ ವೃತ್ತಿಯಲ್ಲಿ ಯಶಸ್ಸು ಶತಸಿದ್ಧ. ಎರಡು ದಶಕಗಳ ಹಿಂದೆ ಇದ್ದಷ್ಟು ಕಷ್ಟ ಈಗಿಲ್ಲ ಈಗ ಸರಿಯಾದ ವೃತ್ತಿಯಲ್ಲಿ ಮುಂದೆ ಸಾಗುವುದಕ್ಕೆ ಬೇಕಾದಷ್ಟು ಅವಕಾಶಗಳಿವೆ. ಮಾರ್ಗದರ್ಷನ ನೀಡುವ ತಜ್ಞರಿದ್ದಾರೆ. ವಾಣಿಜ್ಯ ವಿಭಾಗದ ಭವಿಷ್ಯ ಉಜ್ವಲವಾಗಿದೆ ಎಂದು ಹಿರಿಯ ಚಾರ್ಟೆಡ್ ಅಕೌಂಟೆಂಟ್, ಆರ್. ಎಸ್. ಭಟ್ ಮತ್ತು ಕೋ.ನ ಸಿಎ ರಘುಪತಿ ಎಸ್. ಭಟ್ ಹೇಳಿದರು.
ಅವರು ಎಕ್ಸಲೆಂಟ್ ಮೂಡುಬಿದಿರೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು. ಪಿಪಿಕೆ ಎಸೋಷಿಯೇಟ್ಸ್ ಮುಖ್ಯಸ್ಥ ಸಿಎ ಪ್ರಶಾಂತ್ ಪೈ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪಿಯುಸಿ ಆದ ನಂತರ ಇರುವ ಬಹು ಆಯ್ಕೆಗಳ ವಿವರಣೆ ನೀಡುತ್ತಾ ಏಕಾಗ್ರತೆ ಹಾಗೂ ಬದ್ಧತೆಯಿಂದ ಸಿಎ. ಉತ್ತೀರ್ಣರಾಗಬಹುದು ತನ್ಮೂಲಕ ಆರ್ಥಿಕವಾಗಿ ಬಲಿಷ್ಟರಾಗಬಹುದು ಎಂದರು.
ಸಮಾರಂಭದ ಅಧ್ಯಕ್ಷ ಎಕ್ಸಲೆಂಟ್ ಮೂಡುಬಿದಿರೆಯ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ ಭಾರತದ ಆರ್ಥಿಕ ನೀತಿಯಲ್ಲಿ ವಾಣಿಜ್ಯ ವಿಭಾಗದ ಪಾತ್ರ ಬಹಳ ದೊಡ್ಡದು. ಈಗಲೂ ಭಾರತದಲ್ಲಿ ಸಿಎ ಉತ್ತೀರ್ಣರಾದವರಿಗೆ ಬಹಳಷ್ಟು ಅವಕಾಶಗಳಿವೆ. ಭವಿಷ್ಯದಲ್ಲಿ ಎತ್ತರಕ್ಕೇರುವ ಆರ್ಥಿಕವಾಗಿ ಸದೃಢವಾಗುವ ಉಳಿದವರಿಗೆ ನೆರವಾಗುವ ಹಳ್ಳಿಯಿಂದ – ರಾಷ್ಟ್ರ ರಾಜಧಾನಿಯ ತನಕ ಅನಿವಾರ್ಯವಾಗಿರುವ ಸಿಎ ವೃತ್ತಿ ಆಯ್ಕೆ ಮಾಡಿ ಕಠಿಣ ಪರಿಶ್ರಮದಿಂದ ಮುಂದುವರಿದರೆ ನಿಮ್ಮೆಲ್ಲರ ಭವಿಷ್ಯ ಭದ್ರವಾಗುವುದು ಅಲ್ಲದೆ ಉಳಿದ ವೃತ್ತಿಗಳ ಸರಿಯಾದ ಆಯ್ಕೆ ನಿಮ್ಮ ಮುಂದಿನ ನಡೆಗಳನ್ನು ಬಲಿಷ್ಠಗೊಳಿಸುವುದು ಎಂದರು. ಬಳಿಕ ಭಾರತೀಯ ಸನದಿ ಲೆಕ್ಕಿಗರ ಸಂಘದಿಂದ ಸಿಎ ಅಕಾಶ್ ದೀಪ್ ಹಾಗೂ ಸಿಎ ವೃಂದಾ ಕೊನ್ನರ್ ಅವರಿಂದ ವಾಣಿಜ್ಯ ವಿಭಾಗ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡಲಾಯಿತು.
ವೇದಿಕೆಯಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಶಾಂತ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿಖಿತಾ ಸ್ವಾಗತಿಸಿ, ಅದಿತಿ ಕಾರ್ಯಕ್ರಮ ನಿರೂಪಿಸಿದರು.