
ಗೇರುಕಟ್ಟೆ: ಶ್ರೀ ಗಣೇಶೋತ್ಸವ ಸೇವಾ ಸಮಿತಿ ಇದರ ಸಹಯೋಗದಲ್ಲಿ ಆ. 24ರಂದು ಕಳಿಯ ಬದಿನಡೆ ಬಳಿಯ ಗದ್ದೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಯುವ ಕೆಸರುಗದ್ದೆ ಕ್ರೀಡಾಕೂಟದ ಅಧ್ಯಕ್ಷರಾಗಿ ನವೀನ್ ಗೌಡ ದೋಣಿಪಲ್ಕೆ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಸದಾನಂದ ಶೆಟ್ಟಿ, ಗೌರವ ಸಲಹೆರಾರರಾಗಿ ಭುವನೇಶ್ ಗೇರುಕಟ್ಟೆ, ಕಾರ್ಯದರ್ಶಿಯಾಗಿ ಯೋಗೀಶ್ ಸುವರ್ಣ ಅಡ್ಡಕೊಡಂಗೆ, ಕೋಶಾಧಿಕಾರಿಯಾಗಿ ರಾಜೇಶ್ ಪೆಂರ್ಬುಡ, ಉಪಾಧ್ಯಕ್ಷರಾಗಿ ನಾಣ್ಯಪ್ಪ ಪೂಜಾರಿ ಕಲ್ಲಾಪು, ಶೇಖರ್ ನಾಯ್ಕ, ಜತೆ ಕಾರ್ಯದರ್ಶಿಯಾಗಿ ರತ್ನಾಕರ ಬಳ್ಳಿದಡ್ಡ, ಚಂದ್ರಪ್ರಕಾಶ್ ಕೊರಂಜ, ಸಂಚಾಲಕರಾಗಿ ಲೋಕಿತ್ ಬಳ್ಳಿದಡ್ಡ, ರವೀಂದ್ರ ಸಾಲ್ಯಾನ್ ಆಯ್ಕೆಯಾಗಿದ್ದಾರೆ.