
ನಾರಾವಿ: ಗ್ರಾಮ ಪಂಚಾಯತ್ ಮೊದಲ ಸುತ್ತಿನ ಗ್ರಾಮ ಸಭೆಯು ಆ. 5ರಂದು ಪಂಚಾಯತ್ ಅಧ್ಯಕ್ಷ ರಾಜವರ್ಮ ಜೈನ್ ಅವರ ಅದ್ಯಕ್ಷತೆಯಲ್ಲಿ ಕಾಶೀಮಠ ಸಭಾ ಭವನದಲ್ಲಿ ಜರಗಿತು. ನೋಡೆಲ್ ಅಧಿಕಾರಿಯಾಗಿ ಬೆಳ್ತಂಗಡಿ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಜೋಸೆಫ್ ಅವರು ಭಾಗವಹಿಸಿ ಸಭೆಯನ್ನು ಮುನ್ನಡೆಸಿದರು.
ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಸುಮಿತ್ರಾ, ಸದಸ್ಯರಾದ ಉದಯ ಹೆಗ್ಡೆ, ಸಂತೋಷ್ ಮರ್ದೋಟ್ಟು, ಆಶಾಲತಾ, ಸುದರ್ಶನ್ ಹೆಗ್ಡೆ, ಮೀನಾ, ನಾರಾಯಣ ಪೂಜಾರಿ, ಯಶೋಧ ಕುತ್ಲೂರು, ಮಮತಾ, ಮಲ್ಲಿಕಾ, ಡಯಾನ, ಇಲಾಖಾ ಅಧಿಕಾರಿಗಳು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಶಾಲಾ ಮುಖ್ಯ್ಹೋಪಾಧ್ಯಾಯರು, ಗ್ರಾಮಸ್ಥರು ಭಾಗವಹಿಸಿದ್ದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುಧಾಕರ್ ಸ್ವಾಗತಿಸಿ, ಕಾರ್ಯದರ್ಶಿ ಯೋಗಿಣಿ ಶೆಟ್ಟಿ ಅನುಪಾಲನಾ ವರದಿ ವಾಚಿಸಿದರು. ಸಿಬಂದಿ ಸಂತೋಷ್ ವಾರ್ಡ್ ಸಭೆಯಲ್ಲಿ ಬಂದ ಬೇಡಿಕೆಗಳ ಮಾಹಿತಿ ನೀಡಿದರು. ಸಿಬ್ಬಂದಿ ಸತೀಶ್ ಜಮಾ ಖರ್ಚಿನ ವಿವರ ನೀಡಿ ಕಾರ್ಯಕ್ರಮ ನಿರೂಪಿಸಿದರು. ಪೊಲೀಸ್ ಇಲಾಖೆಗೆ ಭೇಟಿ ಅಥವಾ ಹೆದರಿಕೆ ಹೋಗಲಾಡಿಸುವ ಉದ್ದೇಶದಿಂದ ಮನೆ ಮನೆಗೆ ಜನ ಸ್ನೇಹಿ ಪೊಲೀಸ್ ಸೇವೆ ಪ್ರಾರಂಭಗೊಂಡಿದ್ದು. ಪೊಲೀಸ್ ಇಲಾಖೆಯಿಂದ ಬ್ಯಾನರ್ ಪ್ರದರ್ಶನಗೊಳಿಸಿದರು.

ಬೇಡಿಕೆಗಳು: ನಾರಾವಿ ಪ್ರಾಥಮಿಕ ಅರೋಗ್ಯ ಕೇಂದ್ರದಲ್ಲಿ ಪ್ರತಿ ದಿನ ಅಥವಾ ವಾರಕೊಮ್ಮೆಯಾದರು ವೈದ್ಯರು, ದಂತ ತಪಾಸಣೆ, ಬಿ.ಪಿ. ಶುಗರ್ ತಪಾಸಣೆ ಮಾಡುವಂತೆ ಗ್ರಾಮಸ್ಥರ ಬೇಡಿಕೆ, ಕುತ್ಲೂರು ಅಂಗನವಾಡಿ ದುರಸ್ಥಿ ಕೆಲಸಕ್ಕೆ 2ಲಕ್ಷ ಅನುದಾನ ನೀಡಲಾಗಿತ್ತು, ಅದು ಸಾಕಾಗಲ್ಲ ಹೆಚ್ಚುವರಿ ಮೊತ್ತವನ್ನು ವಿತರಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಗ್ರಾಮಸ್ಥರ ಮನವಿ, ಕುತ್ಲೂರು, ಮಾಗೊಟ್ಟು ಎಂಬಲ್ಲಿ ಟಿ.ಸಿ. ಅಳವಡಿಸಲು ಮೆಸ್ಕಾಂ ಇಲಾಖೆಗೆ ಮನವಿ, ನಾರಾವಿ, ಗುರುವಾಯನಕೆರೆ ಲೋಕೋಪಯೋಗಿ ರಸ್ತೆ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು ಅಪಘಾತಕ್ಕೆ ಅಹ್ವಾನ ನೀಡುತ್ತಿದೆ. ಅದನ್ನು ಕೂಡಲೇ ರಿಪೇರಿ ಮಾಡುವಂತೆ ಇಲಖಾಧಿಕಾರಿವರಿಗೆ ಮನವಿ ಮಾಡಿದರು.