
ಮಾಲಾಡಿ: ಶ್ರೀ ಕೃಷ್ಣ ಭಜನಾ ಮಂದಿರ ಪಣಕಜೆ 23ನೇ ವರ್ಷದ ಸಾರ್ವಜನಿಕ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಭಜನಾ ಮಂದಿರದ ಗೌರವಾಧ್ಯಕ್ಷ ರಾಧಾಕೃಷ್ಣ ಅಂಬೆಟ್ಟು ಮತ್ತು ಭಜನಾ ಮಂದಿರದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಮುಂಡಾಡಿ ಅವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಿತಿ ಗೌರವಾಧ್ಯಕ್ಷೆ ಲೀಲಾವತಿ ವಸಂತ ಪೂಜಾರಿ ಮೂಡಳಿಕೆ, ಅಧ್ಯಕ್ಷ ಸುದೀಪ್ ಕುಲಾಲ್ ಭಂಡಾರದ ಕೊಟ್ಯ ಸಬರಬೈಲು, ಪ್ರಧಾನ ಕಾರ್ಯದರ್ಶಿ ಹರೀಶ್ ಪ್ರಭು ಪಣಕಜೆ, ಕೋಶಾಧಿಕಾರಿ ಮನೋಜ್ ಕೋಟ್ಯಾನ್, ಕೃಷ್ಣ ಜನ್ಮಾಷ್ಟಮಿ ಸಮಿತಿ ಸದಸ್ಯರಾದ ಅಶ್ವಿನಿ ನಾಯಕ್, ಉದಯ ಪ್ರಸಾದ್ ಕುಲಾಲ್, ಪದ್ಮನಾಭ ಕುಲಾಲ್, ಶ್ರೀಧರ ಕುಲಾಲ್, ಪ್ರವೀಣ್ ಕುಮಾರ್, ದಿನೇಶ್ ಕುಲಾಲ್, ವಿಕಾಸ್, ಅಭಿಲಾಷ್ ಆಚಾರ್ಯ, ಭಜನಾ ತಂಡದ ಗುರುಗಳಾದ ಶ್ರೀ ಜನಾರ್ಧನ ಉಜಿರೆ ಹಾಗೂ ಭಜನಾ ಮಂಡಳಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.