
ಧರ್ಮಸ್ಥಳ: ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.4ರಂದು 6ನೇ ದಿನದ ಉತ್ಖನನ ಕಾರ್ಯವು 11ನೇ ಗುರುತಿನಲ್ಲಿ ನಡೆಯುತ್ತಿದೆ. ಧರ್ಮಸ್ಥಳ ಗ್ರಾಮ ಮತ್ತು ಆಸುಪಾಸಿನ ಪ್ರದೇಶದಲ್ಲಿ ಕೊಲೆಯಾದ ಮತ್ತು ಅತ್ಯಾಚಾರಕ್ಕೀಡಾಗಿ ಕೊಲೆಯಾದ ಮೃತದೇಹಗಳನ್ನು ಬೆದರಿಸಿ ಹೂತು ಹಾಕಿಸಲಾಗಿದೆ ಎಂದು ದೂರು ದಾಖಲಿಸಿರುವ ಅನಾಮಧೇಯ ವ್ಯಕ್ತಿಯೊಂದಿಗೆ ಎಸ್.ಐ.ಟಿ. ಅಧಿಕಾರಿಗಳು ಶೋಧ ಕಾರ್ಯಾಚರಣೆ ಇಂದು 11ನೇ ಗುರುತಿನಲ್ಲಿ ನಡೆಸುತ್ತಿದ್ದಾರೆ.
ಅನೇಕ ವರ್ಷಗಳು ಆಗಿರುವ ಕಾರಣ ಮಸುಕುದಾರಿ ಹನ್ನೊಂದನೇ ಗುರುತಿನ ಸ್ಥಳವನ್ನು ಬದಲಾಯಿಸಿದ್ದಾನೆ. ಇಂದು ಮತ್ತೆ ಕಾರ್ಮಿಕರು ಮತ್ತು ಸಣ್ಣ ಜೆಸಿಬಿ ಯಂತ್ರದ ಮೂಲಕ ಕಾರ್ಯಚರಣೆ ನಡೆಯುತ್ತಿದ್ದು, ಎಸ್.ಐ.ಟಿ. ಕಾರ್ಯಾಚರಣೆಗೆ ದಿನಕ್ಕೆ ಆಗುವ ಖರ್ಚಿನ ಬಗ್ಗೆ ಜನರಲ್ಲಿ ಕುತೂಹಲ ಮೂಡಿದ್ದು, ಇದೀಗ ಅಂದಾಜು ದಿನದ ಖರ್ಚು ಒಂದೂವರೆ ಲಕ್ಷ ಎಂದು ತಿಳಿದು ಬಂದಿದೆ. ಈ ಘಟನೆಯ ಬಗ್ಗೆ ಮತ್ತೋರ್ವ ದೂರುದಾರ ಎಂಟ್ರಿ ಆಗಿದ್ದು ಎಸ್.ಐ.ಟಿ ಕಚೇರಿಗೆ ಹಾಜರಾಗಿದ್ದಾರೆ. ನಂಬರ್ 6ರಲ್ಲಿ ಸಿಕ್ಕ ಮೃತದೇಹದ ಅವಶೇಷಗಳು ಪುರುಷನಾಗಿದ್ದು 40 ವರ್ಷಗಳು ಕಳೆದಿದೆ ಎಂದು ಪ್ರಾಥಮಿಕ ತನಿಕೆಯಲ್ಲಿ ವರದಿ ಬಹಿರಂಗವಾಗಿದೆ.