
ಉಜಿರೆ: ಗೌಡರ ಯಾನೆ ಒಕ್ಕಲಿಗರ ಸೇವಾ ಸಮಿತಿ, ಉಜಿರೆ ಗ್ರಾಮ ಸಮಿತಿಯ 2025ನೇ ಸಾಲಿನ ವಾರ್ಷಿಕ ಮಹಾಸಭೆ ಆ.3ರಂದು ಉಜಿರೆ ಶ್ರೀ ಶಾರದಾ ಮಂಟಪದಲ್ಲಿ ಜರಗಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ನೆರವೇರಿಸಿದರು.
ಅಧ್ಯಕ್ಷತೆಯನ್ನು ಉಜಿರೆ ಗ್ರಾಮ ಸಮಿತಿಯ ಅಧ್ಯಕ್ಷ ಧರ್ಣಪ್ಪ ಗೌಡ, ‘ಧರಣಿ’ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಬೆಂಗಳೂರು ಸೈಂಟ್ ಜಾನ್ಸ್ ಮೆಡಿಕಲ್ ಕಾಲೇಜು ಹಿರಿಯ ಸಮಾಜ ವಿಜ್ಞಾನಿ ಡಾ. ರತ್ನ ಎಸ್., ಭಾಗವಹಿಸಿದ್ದರು.
ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಗೌಡ ಸವಣಾಲು, ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಮಹಿಳಾ ವೇದಿಕೆಯ ಅಧ್ಯಕ್ಷೆ ಗೀತಾ ರಾಮಣ್ಣ ಗೌಡ ಗೌರವ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾಧಕರಾದ ಸರಕಾರಿ ನೌಕರರ ಸಂಘದ ಉದ್ದಜಿಗಿತ ಸ್ಪರ್ಧೆ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ವಸಂತಿ, RUPSA ರಾಜ್ಯಮಟ್ಟದ ‘ವಿದ್ಯಾರತ್ನ’ ಉತ್ತಮ ಶಿಕ್ಷಕಿ ಪ್ರಶಸ್ತಿ ಪುಸಸ್ಕೃತ ರೇಷ್ಮಾ, ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ 4ನೇ ಸ್ಥಾನ ಪಡೆದ ತುಷಾರ ಅವರನ್ನು ಸನ್ಮಾನಿಸಲಾಯಿತು.
ಉಜಿರೆ ಗ್ರಾಮ ಸಮಿತಿಯ ಪ್ರಧಾನ ಕಾರ್ಯದರ್ಶಿ ಶೇಖರ ಗೌಡ, ಉಪಾಧ್ಯಕ್ಷ ಗೋಪಾಲಕೃಷ್ಣ ಜಿ.ಕೆ., ಉಪಾಧ್ಯಕ್ಷ ರಮೇಶ್ ಪೈಲಾರ್, ಖಜಾಂಜಿ ಬಾಲಕೃಷ್ಣ ಗೌಡ ಕೊರಮೇರು, ಯುವ ವೇದಿಕೆಯ ಅಧ್ಯಕ್ಷ ಸೋಮಶೇಖರ ಕೆ., ಕಾರ್ಯದರ್ಶಿ ಭರತ್, ಮಹಿಳಾ ವೇದಿಕೆಯ ಅಧ್ಯಕ್ಷೆ ರಾಜೇಶ್ವರಿ ಚಂದ್ರಕಾಂತ, ಕಾರ್ಯದರ್ಶಿ ಮೀನಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತಾಲೂಕು ಸಂಘದ ಪದಾಧಿಕಾರಿಗಳು, ಗ್ರಾಮ ಸಮಿತಿಯ ಸದಸ್ಯರು, ಸ್ವಜಾತಿ ಬಾಂಧವರು ಹಾಜರಿದ್ದರು. ಉಜಿರೆ ಗ್ರಾಮ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಗೌಡ ಅಪ್ರಮೇಯ ಪ್ರಸ್ತಾವನೆ ಗೈದರು.
ಕಾರ್ಯಕ್ರಮದ ಮೊದಲು ಸಣ್ಣ ಮಕ್ಕಳಿಗೆ ರಸ ಪ್ರಶ್ನೆ, ವಿದ್ಯಾರ್ಥಿಗಳಿಗೆ, ಪುರುಷ, ಮಹಿಳೆಯರಿಗೆ ಒಂದು ನಿಮಿಷದ ಆಟ ನಡೆಯಿತು.ಗ್ರಾಮ ಸಮಿತಿಯ ಸಂಚಾಲಕ ಉಪನ್ಯಾಸಕ ಆನಂದ ಗೌಡ ಸ್ವಾಗತಿಸಿ, ಧರ್ಮೇಂದ್ರ ಕುಮಾರ್ ಬೆಳಾಲು ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಲಕ್ಷ್ಮಣ ಗೌಡ ವಂದಿಸಿದರು.